ಸಿಪಿಇಸಿ: ಭದ್ರತಾ ಕ್ಲಿಯರೆನ್ಸ್ ಬೇಕಿರುವುದು ವಿದೇಶಿಯರಿಗಲ್ಲ, ಪಾಕಿಸ್ತಾನದವರಿಗೆ!

ಸಿಪಿಇಸಿ ಯೋಜನೆಗಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಚೀನಾದ ನೌಕರರು ಅನುಮಾನಸ್ಪದವಾಗಿ ಕಾಣೆಯಾಗುತ್ತಿದ್ದು, ವಿದೇಶಿಯರಿಗೆ ಭದ್ರತಾ ಕ್ಲಿಯರೆನ್ಸ್ ನೀಡುವ ಬದಲು...
ಸಿಪಿಇಸಿ: ಭದ್ರತಾ ಕ್ಲಿಯರೆನ್ಸ್ ಬೇಕಿರುವುದು ವಿದೇಶಿಯರಿಗಲ್ಲ, ಪಾಕಿಸ್ತಾನದವರಿಗೆ!
ಸಿಪಿಇಸಿ: ಭದ್ರತಾ ಕ್ಲಿಯರೆನ್ಸ್ ಬೇಕಿರುವುದು ವಿದೇಶಿಯರಿಗಲ್ಲ, ಪಾಕಿಸ್ತಾನದವರಿಗೆ!
ಪಂಜಾಬ್(ಪಾಕಿಸ್ತಾನ): ಸಿಪಿಇಸಿ ಯೋಜನೆಗಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಚೀನಾದ ನೌಕರರು ಅನುಮಾನಸ್ಪದವಾಗಿ ಕಾಣೆಯಾಗುತ್ತಿದ್ದು, ವಿದೇಶಿಯರಿಗೆ ಭದ್ರತಾ ಕ್ಲಿಯರೆನ್ಸ್ ನೀಡುವ ಬದಲು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಅಧಿಕಾರಿಗಳು ಸಿಪಿಇಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಮ್ಮದೆ ಪ್ರಾಂತ್ಯದ ನಾಗರಿಕರಿಗೆ ಭದ್ರತಾ ಕ್ಲಿಯರೆನ್ಸ್ ನೀಡುತ್ತಿರುವ ವಿಲಕ್ಷಣ ಘಟನೆ ವರದಿಯಾಗಿದೆ. 
ಸಾಮಾನ್ಯವಾಗಿ ವಿದೇಶಿ ನೆಲದಲ್ಲಿ ಕಾರ್ಯನಿರ್ವಹಿಸುವ ನಾಗರಿಕರಿಗೆ ಯೋಜನೆ ಕಾಮಗಾರಿ ನಡೆಯುತ್ತಿರುವ ಪ್ರದೇಶದಿಂದ ಭದ್ರತಾ ಕ್ಲಿಯರೆನ್ಸ್ ನೀಡಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಚೀನಾ ಎಂಜಿನಿಯರ್ ಗಳೂ ಸೇರಿದಂತೆ ಹಲವು ನೌಕರರು ಅನುಮಾನಾಸ್ಪದವಾಗಿ ಕಾಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ವಿದೇಶಿ ನಾಗರಿಕರ ಅನುಮಾನಾಸ್ಪದ ನಾಪತ್ತೆಯನ್ನು ತಪ್ಪಿಸಲು ಸ್ಥಳೀಯರಿಗೇ ಭದ್ರತಾ ಕ್ಲಿಯರೆನ್ಸ್ ನೀಡಲು ಪಾಕಿಸ್ತಾನ ಕ್ರಮ ಕೈಗೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com