ಜೋಧ್ ಪುರ: ಸುಖೋಯ್ 30 ಯುದ್ಧ ವಿಮಾನ ಹಾರಾಟ ನಡೆಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್

ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಇಂದು(ಬುಧವಾರ) ರಾಜಸ್ಥಾನ ಜೋಧ್ ಪುರ ವಾಯುನೆಲೆಗೆ ಆಗಮಿಸಿದ್ದರು.
ಸುಖೋಯ್ 30 ಯುದ್ಧ ವಿಮಾನ ಹಾರಾಟ ನಡೆಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್
ಸುಖೋಯ್ 30 ಯುದ್ಧ ವಿಮಾನ ಹಾರಾಟ ನಡೆಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್
ಜೋಧ್ ಪುರ: ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಇಂದು(ಬುಧವಾರ) ರಾಜಸ್ಥಾನ ಜೋಧ್ ಪುರ ವಾಯುನೆಲೆಗೆ ಆಗಮಿಸಿದ್ದರು. ಈ ವೇಳೆ ಅವರು ಸುಖೋಯ್ 30 ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದು ಸುಖೋಯ್ ನಲ್ಲಿ ಹಾರಾಟ ನಡೆಸಿದ ಭಾರತದ ಎರಡನೇ ಮಹಿಳೆ ಎನಿಸಿದರು.
ಈ ಮೊದಲು ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಸುಖೋಯ್ ವಿಮಾನದಲ್ಲಿ ಹಾರಾಟ ನಡೆಸಿದ್ದರು. ಮಾಜಿ ರಾಷ್ಟ್ರಪತಿ, ಅಬ್ದುಲ್ ಕಲಾಂ ಸಹ ಈ ಯುದ್ಧ ವಿಮಾನ ಹಾರಾಟದಲ್ಲಿ ಪಾಲ್ಗೊಂಡಿದ್ದರು.
ದೇಶದ ಪ್ರಥಮ ಮಹಿಳಾ ರಕ್ಷಣಾ ಸಚಿವರಾದ ನಿರ್ಮಲಾ ಸೀತಾರಾಮನ್ ವಿಮಾನದ ಮಹಿಳಾ ಪೈಲಟಠಿಂಭಾಗದ ಆಸನದಲ್ಲಿ ಕುಳಿತು 45 ನಿಮಿಷಗಳ ಕಾಲ ಹಾರಾಟ ನಡೆಸಿದರು.
ಸುಖೋಯ್ ವಿಮಾನದ ಕಾರ್ಯಾಚರಣೆ ಹಾಗೂ ಒಟ್ಟಾರೆ ಸಾಮರ್ಥ್ಯದ ಪರಿಶೀಲನೆಗಾಗಿ ಸಚಿವೆ ಈ ಹಾರಾಟದಲ್ಲಿ ಭಾಗವಹಿಸಿದ್ದಾರೆ ಎಂದು ರಕ್ಷಣಾ ಸಚಿವಾಲಯ ಮೂಲಗಳು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com