ಪದ್ಮಾವತ್ ವಿವಾದ: ಪ್ರಸೂನ್ ಜೋಶಿಗೆ ಅಲಹಾಬಾದ್ ಹೈಕೋರ್ಟ್ ನೊಟೀಸ್ ಜಾರಿ

ಅಲಹಾಬಾದ್ ಹೈಕೋರ್ಟ್ ಕೇಂದ್ರ ಚಲನಚಿತ್ರ ಪ್ರಮಾಣಪತ್ರ ಮಂಡಳಿ ಅಧ್ಯಕ್ಷ ....
ಪ್ರಸೂನ್ ಜೋಶಿ
ಪ್ರಸೂನ್ ಜೋಶಿ
ನವದೆಹಲಿ: ಅಲಹಾಬಾದ್ ಹೈಕೋರ್ಟ್ ಕೇಂದ್ರ ಚಲನಚಿತ್ರ ಪ್ರಮಾಣಪತ್ರ ಮಂಡಳಿ ಅಧ್ಯಕ್ಷ ಪ್ರಸೂನ್ ಜೋಶಿ ಅವರಿಗೆ ನ್ಯಾಯಾಂಗ ನಿಂದನೆ ನೊಟೀಸ್ ನ್ನು ಜಾರಿ ಮಾಡಿದೆ.
ಪದ್ಮಾವತ್ ಸಿನಿಮಾ ಬಿಡುಗಡೆಗೆ ನಿಷೇಧ ಹೇರಬೇಕೆಂದು ಸಲ್ಲಿಸಲಾಗಿದ್ದ ಮನವಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಅಲಹಾಬಾದ್ ಹೈಕೋರ್ಟ್ ಈ ನೊಟೀಸ್ ನ್ನು ಜಾರಿ ಮಾಡಿದೆ.
ಕಳೆದ ನವೆಂಬರ್ ನಲ್ಲಿ ಅರ್ಜಿದಾರರು ಅಲಹಾಬಾದ್ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಪದ್ಮಾವತ್ ಸಿನಿಮಾದಲ್ಲಿ ಸತಿ ಪದ್ಧತಿಯನ್ನು ಪ್ರೋತ್ಸಾಹಿಸುವುದರಿಂದ ಚಿತ್ರಕ್ಕೆ ನಿಷೇಧ ಹೇರಬೇಕೆಂದು ಕೋರಿದ್ದರು.
ಆದರೆ ನ್ಯಾಯಾಲಯ ನವೆಂಬರ್ 9ರಂದು ಅರ್ಜಿಯನ್ನು ತಿರಸ್ಕರಿಸಿತ್ತು. ಆದರೆ ಅರ್ಜಿದಾರರಿಗೆ 1983ರ ನಿಯಮ 32ರಡಿಯಲ್ಲಿ ದೂರು ಸಲ್ಲಿಸಿ ಮೂರು ವಾರಗಳೊಳಗೆ ವಿವಾದವನ್ನು ಇತ್ಯರ್ಥಪಡಿಸಿಕೊಳ್ಳುವಂತೆ ಆದೇಶಿಸಲಾಗಿತ್ತು.
ಅರ್ಜಿದಾರರು ಕೇಂದ್ರ ಚಲನಚಿತ್ರ ಪ್ರಮಾಣ ಮಂಡಳಿಯೆದುರು ನವೆಂಬರ್ 13ರಂದು ಪ್ರಾತಿನಿಧ್ಯವನ್ನು ಸಲ್ಲಿಸಿದ್ದರು. ಆದರೆ ಇದಕ್ಕೆ ಪ್ರಸೂನ್ ಜೋಶಿ ಉತ್ತರಿಸಿರಲಿಲ್ಲ.
ಈ ಹಿನ್ನೆಲೆಯಲ್ಲಿ ಅಲಹಾಬಾದ್ ಹೈಕೋರ್ಟ್ ಪ್ರಸೂನ್ ಜೋಶಿಯವರಿಗೆ ನ್ಯಾಯಾಂಗ ನಿಂದನೆ ನೊಟೀಸನ್ನು ಜಾರಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com