ಭಯೋತ್ಪಾದನೆಗೆ ಕುಮ್ಮಕ್ಕು: ಹಫೀಜ್ ಸಯೀದ್, ಸಲಾಹುದ್ದೀನ್ ಸೇರಿ 12 ಮಂದಿ ವಿರುದ್ಧ ಎನ್ಐಎ ಆರೋಪಪಟ್ಟಿ

ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿರುವ ಆರೋಪದ ಮೇಲೆ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಮತ್ತು ಹಿಜ್ಬುಲ್...
ಕಲ್ಲು ತೂರಾಟ
ಕಲ್ಲು ತೂರಾಟ
ನವದೆಹಲಿ: ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿರುವ ಆರೋಪದ ಮೇಲೆ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸಲಾಹುದ್ದೀನ್ ವಿರುದ್ಧ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಆರೋಪ ಪಟ್ಟಿ ದಾಖಲಿಸಿದೆ. 
ಜಮ್ಮು ಮತ್ತು ಕಾಶ್ಮೀರದಲ್ಲಿ ಕಲ್ಲು ತೂರಾಟಗಾರರು, ಪ್ರತ್ಯೇಕವಾದಿಗಳು ಹಾಗೂ ಭಯೋತ್ಪಾದಕರು ಸೇರಿಕೊಂಡು ಕಣಿವೆ ರಾಜ್ಯದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸಿದ ಆರೋಪದಲ್ಲಿ ಸಯೀದ್ ಮತ್ತು ಸಲಾಹುದ್ದೀನ್ ಮತ್ತು ಇತರ 12 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 
ಎನ್ಐಎ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಆಫ್ತಾಬ್ ಅಹ್ಮದ್ ಶಾ, ಅಲ್ತಾಫ್ ಅಹ್ಮದ್ ಶಾ, ನಯೀಮ್ ಅಹಮ್ಮದ್ ಖಾನ್, ಫಾರೂಖ್ ಅಹಮ್ಮದ್ ದಾರ್, ಮೊಹಮ್ಮದ್ ಅಕ್ಬರ್ ಖಾಂಡೆ, ರಾಜಾ ಮೆಹರಾಜುದ್ದೀನ್ ಕಲ್ವಾಲ್ ಹಾಗೂ ಬಶೀರ್ ಅಹಮ್ಮದ್ ಭಟ್ ಅಲ್ಲದೇ ಕಲ್ಲು ತೂರಾಟಗಾರರನ್ನು ಆಯೋಜಿಸುತ್ತಿದ್ದ ಕಮ್ರಾನ್ ಯೂಸುಫ್ ಹಾಗೂ ಜಾವೇದ್ ಅಹಮ್ಮದ್ ಭಟ್ ಹೆಸರಿದ್ದು 12,794 ಪುಟಗಳ ಆರೋಪ ಪಟ್ಟಿಯನ್ನು ದೆಹಲಿಯ ಪಟಿಯಾಲಾ ಹೈಕೋರ್ಟ್ ಗೆ ಸಲ್ಲಿಸಿದೆ. 
ಎನ್ಐಎ ಕಳೆದ ವರ್ಷ ಸುಮಾರು 60 ಜಾಗಗಳ ಮೇಲೆ ದಾಳಿ ನಡೆಸಿತ್ತು. ಅಲ್ಲದೇ 300 ಸಾಕ್ಷಿಗಳನ್ನು ಪ್ರಶ್ನಿಸಿ ಸುಮಾರು 950ಕ್ಕೂ ಹೆಚ್ಚು ದಾಖಲೆಗಳು ಹಾಗೂ 600ಕ್ಕೂ ಹೆಚ್ಚು ಎಲೆಕ್ಟ್ರಾನಿಕ್ ಉಪಕರಣಗಳನ್ನು ಪರಿಶೀಲಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com