

ದೆಹಲಿ- ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ಹಿನ್ನೆಲೆಯಲ್ಲಿ ಉಗ್ರ ಹಫೀಜ್ ಸಹೀದ್ , ಸಯ್ಯದ್ ಸಲಾಹುದ್ದೀನ್, ಹಾಗೂ 10 ಮಂದಿ ಪ್ರತ್ಯೇಕತಾವಾದಿಗಳ ವಿರುದ್ಧ ದೆಹಲಿ ನ್ಯಾಯಾಲಯಕ್ಕೆ ರಾಷ್ಟ್ರೀಯ ತನಿಖಾ ದಳ- ಎನ್ ಐಎ ಚಾರ್ಜ್ ಶೀಟ್ ಸಲ್ಲಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ತರುಣ್ ಶೆರವತ್ ಮುಂದೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ನಾಳೆಯಿಂದ ಈ ಬಗ್ಗೆ ನ್ಯಾಯಾಧೀಶರು ಗಮನ ಹರಿಸಲಿದ್ದಾರೆ.ಹಫೀಜ್ ಸಹೀದ್ ಹಾಗೂ ಲಷ್ಕರ್ - ಇ- ತೊಯ್ಬಾ ಸಂಘಟನೆ ಮುಖಂಡ ಸಯ್ಯದ್ ಸಲಾಹುದ್ದೀನ್ ಸೇರಿದಂತೆ 12ಮಂದಿ ವಿರುದ್ಧ 12 ಸಾವಿರದ 794 ಪುಟುಗಳ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ಹಾಗೂ ಸರ್ಕಾರದ ವಿರುದ್ಧ ಪ್ರಚೋದನೆ ಆರೋಪದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳ ಜಾರ್ಜ್ ಶೀಟ್ ದಾಖಲಿಸಿದೆ.
Advertisement