ಜೈಪುರ ಸಾಹಿತ್ಯೋತ್ಸವದಲ್ಲಿ ಸೆನ್ಸಾರ್ ಬೋರ್ಡ್ ಮುಖ್ಯಸ್ಥರು ಪಾಲ್ಗೊಳ್ಳಲು ಬಿಡಲ್ಲ: ಕರ್ನಿ ಸೇನಾ

ರಾಜಸ್ತಾನದ ರಾಜಧಾನಿ ಜೈಪುರದಲ್ಲಿ ಇದೇ ತಿಂಗಳ 25 ರಿಂದ ಜೈಪುರ ಸಾಹಿತ್ಯೋತ್ಸವ ಪ್ರಾರಂಭಗೊಳ್ಳಲಿದ್ದು, ಈ ಉತ್ಸವದಲ್ಲಿ ಸೆನ್ಸಾರ್ ಬೋರ್ಡ್ ಅಧ್ಯಕ್ಷ ಪ್ರಸೂನ್ ಜೋಶಿ ಪಾಲ್ಗೊಳ್ಳಲು ಬಿಡಲ್ಲ ಎಂದು ರಜಪೂತ್ ಕರ್ನಿ ಸೇನಾ ಪೇಳಿದೆ.
ಸೆನ್ಸಾರ್ ಬೋರ್ಡ್ ಅಧ್ಯಕ್ಷ ಪ್ರಸೂನ್ ಜೋಶಿ  ಸಾಂಧರ್ಬಿಕ ಚಿತ್ರ
ಸೆನ್ಸಾರ್ ಬೋರ್ಡ್ ಅಧ್ಯಕ್ಷ ಪ್ರಸೂನ್ ಜೋಶಿ ಸಾಂಧರ್ಬಿಕ ಚಿತ್ರ

ರಾಜಸ್ತಾನ ; ರಾಜಸ್ತಾನದ ರಾಜಧಾನಿ ಜೈಪುರದಲ್ಲಿ ಇದೇ ತಿಂಗಳ 25 ರಿಂದ ಜೈಪುರ ಸಾಹಿತ್ಯೋತ್ಸವ ಪ್ರಾರಂಭಗೊಳ್ಳಲಿದ್ದು, ಈ ಉತ್ಸವದಲ್ಲಿ ಸೆನ್ಸಾರ್ ಬೋರ್ಡ್ ಅಧ್ಯಕ್ಷ  ಪ್ರಸೂನ್ ಜೋಶಿ ಪಾಲ್ಗೊಳ್ಳಲು ಬಿಡಲ್ಲ ಎಂದು ರಜಪೂತ್ ಕರ್ನಿ ಸೇನಾ ಪೇಳಿದೆ.

ಅಲ್ಲದೇ, ಪದ್ಮಾವತ್ ಚಿತ್ರ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮುಂದೆ ರಾಜಸ್ತಾನದಲ್ಲಿ ಯಾವುದೇ ಚಿತ್ರ ಚಿತ್ರೀಕರಿಸಲು ಅವಕಾಶ ಕೊಡಲ್ಲ ಎಂದು  ಕರ್ನಿ ಸೇನಾ ಮುಖಂಡರು ತಿಳಿಸಿದ್ದಾರೆ.

ಪದ್ಮಾವತ್ ಚಿತ್ರ ಪ್ರದರ್ಶನಕ್ಕೆ  ಮಧ್ಯಪ್ರದೇಶ, ಹರಿಯಾಣ, ರಾಜಸ್ತಾನ  ಹಾಗೂ ಗುಜರಾತ್ ರಾಜ್ಯಗಳಲ್ಲಿ ಹೇರಿದ್ದ ನಿಷೇಧವನ್ನು ನಿನ್ನೆಯಷ್ಟೇ ಸುಪ್ರೀಂಕೋರ್ಟ್ ತೆರವುಗೊಳಿಸಿತ್ತು. ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಕಾನೂನು  ಇಲಾಖೆ ಅಧ್ಯಯನ ನಡೆಸುತ್ತಿದ್ದು, ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ರಾಜಸ್ತಾನ ಗೃಹ ಸಚಿವ ಗುಲಾಬ್ ಚಂದ್ ಕಠಾರಿಯಾ ತಿಳಿಸಿದ್ದಾರೆ.

ಪದ್ಮಾವತ್ ಚಿತ್ರ ನಿಷೇಧಕ್ಕೆ ಆಗ್ರಹಿಸಿ ಸೆನ್ಸಾರ್ ಬೋರ್ಡ್ ಮುಂಭಾಗ ಕಳೆದ ವಾರ ಪ್ರತಿಭಟನೆ ನಡೆಸುತ್ತಿದ್ದ 132 ಮಂದಿ ರಜಪೂತ್ ಕರ್ನಿ ಸೇನಾ ಪ್ರತಿಭಟನಾಕಾರರನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಕೆಲ ದಶ್ಯಗಳಿಗೆ ಕತ್ತರಿಹಾಕಿ, ಚಿತ್ರದ ಟೈಟಲ್ ನ್ನು ಬದಲಾಯಿಸಿ ಇದೇ 25ರಂದು   ಚಿತ್ರ ಬಿಡುಗಡೆ ಮಾಡುವಂತೆ ಸೆನ್ಸಾರ್ ಬೋರ್ಡ್ ಸೂಚಿಸಿತ್ತು.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com