ಎಲ್ಲಾ 11 ಸಾವಿರ ರೈಲುಗಳು, 8,500 ನಿಲ್ದಾಣಗಳಲ್ಲಿ ಸಿಸಿಟಿವಿ ಕಣ್ಗಾವಲು!

ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ರೈಲ್ವೆ ಇಲಾಖೆ ಎಲ್ಲಾ 11 ಸಾವಿರ ರೈಲುಗಳು, 8,500 ರೈಲು ನಿಲ್ದಾಣಗಳಲ್ಲಿ ಸಿಸಿಟಿವಿ ಕಣ್ಗಾವಲಿಡಲು ತೀರ್ಮಾನಿಸಿದೆ.
ಭಾರತೀಯ ರೈಲ್ವೆ
ಭಾರತೀಯ ರೈಲ್ವೆ
ನವದೆಹಲಿ: ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ರೈಲ್ವೆ ಇಲಾಖೆ ಎಲ್ಲಾ 11 ಸಾವಿರ ರೈಲುಗಳು, 8,500 ರೈಲು ನಿಲ್ದಾಣಗಳಲ್ಲಿ ಸಿಸಿಟಿವಿ ಕಣ್ಗಾವಲಿಡಲು ತೀರ್ಮಾನಿಸಿದೆ. 
ಸುಮಾರು 12 ಲಕ್ಷ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲು ರೈಲ್ವೆ ಇಲಾಖೆ ತೀರ್ಮಾನಿಸಿದ್ದು, ದೇಶಾದ್ಯಂತ ಇನ್ನು ಮುಂದೆ ಎಲ್ಲಾ ರೈಲು ಹಾಗೂ ರೈಲು ನಿಲ್ದಾಣಗಳು ಸಿಸಿಟಿವಿ ಕಣ್ಗಾವಲಿನಲ್ಲಿರಲಿದೆ. ಇದಕ್ಕಾಗಿ 2018-19 ನೇ ಸಾಲಿನ ಬಜೆಟ್ ನಲ್ಲಿ 3,000 ಕೋಟಿ ರೂಪಾಯಿ ಅನುದಾನ ಘೋಷಿಸಲಾಗುತ್ತದೆ ಎಂಬ ನಿರೀಕ್ಷೆ ಇದೆ.
ಈಗಿರುವ ಯೋಜನೆಯ ಪ್ರಕಾರ ಪ್ರತಿ ರೈಲು ಕೋಚ್ ಗಳಲ್ಲಿಯೂ 8 ಸಿಸಿಟಿವಿ ಕ್ಯಾಮರಗಾಳಿರಲಿದೆ. ಪ್ರಸ್ತುತ 395 ರೈಲು ನಿಲ್ದಾಣಗಳು ಹಾಗೂ 50 ರೈಲುಗಳು ಸಿಸಿಟಿವಿ ವ್ಯವಸ್ಥೆ ಹೊಂದಿವೆ, ಇನ್ನು ಎರಡು ವರ್ಷಗಳಲ್ಲಿ ರಾಜಧಾನಿ, ಶತಾಬ್ದಿ ಹಾಗೂ ಎಲ್ಲಾ ಸ್ಥಳೀಯ ರೈಲುಗಳಲ್ಲಿ ಸಿಸಿಟಿವಿ ಇರಲಿದೆ ಎಂದು ಹಿರಿಯ ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com