ಸರ್ವೋಚ್ಚ ನ್ಯಾಯಾಲಯ
ಸರ್ವೋಚ್ಚ ನ್ಯಾಯಾಲಯ

ನ್ಯಾಯಮೂರ್ತಿ ಲೋಯಾ ಸಾವು: ಬಾಂಬೆ ಹೈಕೋರ್ಟ್ ನಿಂದ ಸುಪ್ರೀಂ ಗೆ ಮನವಿಗಳ ವರ್ಗಾವಣೆಗೆ ಆದೇಶ

ಸೊಹ್ರಾಬುದ್ದೀನ್ ಎನ್ ಕೌಂಟ್ರ್ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ನ್ಯಾಯಾಢೀಶರಾಗಿದ್ದ ಬಿಎಚ್ ಲೋಯಾ ನಿಗೂಢ ಸಾವಿನ ಪ್ರಕರಣದ ಸಂಬಂಧ ಬಾಂಬೆ ಹೈಕೋರ್ಟ್ ನಲ್ಲಿ ..........
Published on
ನವದೆಹಲಿ: ಸೊಹ್ರಾಬುದ್ದೀನ್ ಎನ್ ಕೌಂಟ್ರ್ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ನ್ಯಾಯಾಢೀಶರಾಗಿದ್ದ ಬಿಎಚ್ ಲೋಯಾ ನಿಗೂಢ ಸಾವಿನ ಪ್ರಕರಣದ ಸಂಬಂಧ ಬಾಂಬೆ ಹೈಕೋರ್ಟ್ ನಲ್ಲಿ ಸಲ್ಲಿಸಲಾಗಿರುವ ಎರಡು ಮನವಿ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಗೆ ವರ್ಗಾಯಿಸುವಂತೆ ಸರ್ವೋಚ್ಚ ನ್ಯಾಯಾಲಯ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಆದೇಶಿಸಿದೆ.
ನ್ಯಾಯಮೂರ್ತಿ ಲೋಯಾ ಪ್ರಕರಣ ಸಂಬಂಧ ಎಲ್ಲಾ ದಾಖಲೆಗಳನ್ನು ಪರಿಶೀಲಿಸಲು ನ್ಯಾಯ್ಲಯ ತೀರ್ಮಾನಿಸಿದೆ ಎಂದಿರುವ ಪೀಠ ಮುಂದಿನ ಹಂತದ ವಿಚಾರಣೆಯನ್ನು ಫೆಬ್ರವರಿಯ ಮೊದಲ ವಾರದಲ್ಲಿ ನಡೆಸುವುದಾಗಿ ಹೇಳಿದೆ.ಮಾದ್ಯಮ ವರದಿ ಮತ್ತು ನಾಲ್ವರು ಸುಪ್ರೀಂ ನ್ಯಾಯಮೂರ್ತಿಗಳ ಹೇಳಿಕೆಯ ನಂತರ ಅವರುಗಳಿಂದ ಲೋಯಾ ಪ್ರಕರಣದ ಬಗೆಗೆ ಯಾವ ಹಸ್ತಕ್ಷೇಪವಾಗುವುದಿಲ್ಲ ಎಂದು ಖಚಿತಪಡಿಸಿಕೊಂಡು ಮತ್ತೆ ತನಿಖೆ ಮುಂದುವರಿಸಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.
ನ್ಯಾಯಮೂರ್ತಿ ಲೋಯಾ ಹೃದಯ ಸ್ಥಂಭನದಿಂಡ ಮೃತರಾದರೆಂದು ಮೂವರು ನ್ಯಾಯಮೂರ್ತಿಗಳ ಪೀಠ ಹೆಳಿಕೆಯಲ್ಲಿ ದಾಖಲಿಸಿಕೊಂಡಿದೆ . 2014 ರಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ನ್ಯಾಯಮೂರ್ತಿ ಲೋಯಾ ಅವರ ಸಾವಿನ ಬಗ್ಗೆ ಸ್ವತಂತ್ರ ತನಿಖೆ ನಡೆಯಬೇಕೆಂದು ಎರಡು ಪ್ರತ್ಯೇಕ ಮನವಿ ಬಾಂಬೆ ಹೈಕೋರ್ಟ್ ನಲ್ಲಿ ಸಲ್ಲಿಕೆಯಾಗಿತ್ತು. ನಿಗೂಢವಾಗಿ ಮೃತಪಟ್ಟಿದ್ದ ಸಿಬಿಐ ನ್ಯಾಯಾಧೀಶರ ಮರಣೋತ್ತರ ವರದಿಯನ್ನು  ಮಹಾರಾಷ್ಟ್ರ ಸರ್ಕಾರ ಈ ತಿಂಗಳ ಅಂತ್ಯದೊಳಗೆ ಒದಗಿಸಬೇಕೆಂದು ಸುಪ್ರೀಂ ಕೋರ್ಟ್ ಆಗ್ರಹಿಸಿದೆ.
ಮಹಾರಾಷ್ಟ್ರ ಮೂಲದ ಪತ್ರಕರ್ತ ಲೋನಾ ಮತ್ತು ಸಾಮಾಜಿಕ ಕಾರ್ಯಕರ್ತ ತಹಶೀನ್ ಪೂನವಾಲಾ ಸ್ವತಂತ್ರ ಲೋಯಾ ಪ್ರಕರಣದ ಸ್ವತಂತ್ರ ವಿಚಾರಣೆಗೆ ಸಂಬಂಧ ಪ್ರತ್ಯೇಕವಾಗಿ ಮನವಿ ಸಲ್ಲಿಸಿದ್ದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com