ದಾವೋಸ್ ಗೆ ಪ್ರಧಾನಿ ಮೋದಿ ಪ್ರಯಾಣ

ಸ್ವಿಟ್ಜರ್ಲೆಂಡ್ ನ ದಾವೋಸ್ ನಲ್ಲಿ ಇಂದಿನಿಂದ ಆರಂಭವಾಗಲಿರುವ ವಿಶ್ವ ಆರ್ಥಿಕ ವೇದಿಕೆಯ 48ನೇ ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರಮೋದಿ ಇಂದು ದಾವೋಸ್ ಗೆ ಪ್ರಯಾಣ ಬೆಳೆಸಲಿದ್ದಾರೆ.
ಪ್ರಧಾನಿ ಮೋದಿ ವಿದೇಶ ಪ್ರಯಾಣದ ( ಸಾಂದರ್ಭಿಕ ಚಿತ್ರ)
ಪ್ರಧಾನಿ ಮೋದಿ ವಿದೇಶ ಪ್ರಯಾಣದ ( ಸಾಂದರ್ಭಿಕ ಚಿತ್ರ)

ನವದೆಹಲಿ :ಸ್ವಿಟ್ಜರ್ಲೆಂಡ್ ನ ದಾವೋಸ್ ನಲ್ಲಿ ಇಂದಿನಿಂದ ಆರಂಭವಾಗಲಿರುವ ವಿಶ್ವ ಆರ್ಥಿಕ ವೇದಿಕೆಯ 48ನೇ ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರಮೋದಿ  ದಾವೋಸ್  ಪ್ರವಾಸ ಕೈಗೊಂಡಿದ್ದಾರೆ.

ಪ್ರಧಾನಿಯೊಂದಿಗೆ ಹಣಕಾಸು ಸಚಿವ ಅರುಣ್  ಜೇಟ್ಲಿ, ವಾಣಿಜ್ಯ ಮತ್ತು ಉದ್ಯಮ ಸಚಿವ ಸುರೇಶ್ ಪ್ರಭು ಕೂಡಾ ದಾವೋಸ್ ಗೆ ಭೇಟಿ ನೀಡುತ್ತಿದ್ದಾರೆ.

ವಿಶ್ವ ಆರ್ಥಿಕ ವೇದಿಕೆಯ ಶೃಂಗಸಭೆಯನ್ನುದ್ದೇಶಿಸಿ ನರೇಂದ್ರಮೋದಿ ನಾಳೆ ಭಾಷಣ ಮಾಡಲಿದ್ದಾರೆ. ಇತ್ತೀಚಿನ ದಿನಗಳಾದ ರಾಜಕೀಯ, ಆರ್ಥಿಕ, ಸಾಮಾಜಿಕ ಸವಾಲುಗಳು ಎದುರಿಸುವ ನಿಟ್ಟಿನಲ್ಲಿ ಹೊಂದಿರುವ ಗುರಿ ಮತ್ತಿತರ ವಿಷಯ ಕುರಿತಂತೆ ಮೋದಿ ಭಾಷಣ ಮಾಡಲಿದ್ದಾರೆ.

 ಸ್ವಿಸ್  ಒಕ್ಕೂಟದ ಅಧ್ಯಕ್ಷ ಅಲೈನ್ ಬರ್ಸೆಟ್ ಅವರೊಂದಿಗೆ ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಕುರಿತು ಮೋದಿ ಮಾತುಕತೆ ನಡೆಸಲಿದ್ದಾರೆ.ಅಂತಾರಾಷ್ಟ್ರೀಯ ಉದ್ಯಮ ಸಮಿತಿ ಹಾಗೂ ಅಂತಾರಾಷ್ಟ್ರೀಯ ಉದ್ಯಮಗಳ ಮುಖಂಡರೊಂದಿಗೂ ಮೋದಿ ಸರಣಿ ಸಭೆ ಏರ್ಪಟ್ಟಾಗಿದೆ. ಈ ವರ್ಷ ವಿವಿಧ ರಾಷ್ಟ್ರಗಳ ರಾಜಕಾರಣಿಗಳು, ಜಾಗತಿಕ ಉದ್ಯಮಿಗಳು, ಸೇರಿದಂತೆ ಮೂರು ಸಾವಿರ ಮಂದಿ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com