ಇಸ್ರೇಲ್ ಪ್ರಧಾನಿಯನ್ನು ಶ್ರೀನಗರದ ಲಾಲ್ ಚೌಕ್ ಗೆ ಏಕೆ ಕರೆದೊಯ್ಯಲಿಲ್ಲ: ಮೋದಿಗೆ ಶಿವಸೇನೆ ಪ್ರಶ್ನೆ

2019 ರ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಣಯ ಕೈಗೊಂಡಿರುವ ಶಿವಸೇನೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತೊಮ್ಮೆ ಟೀಕಾಪ್ರಹಾರ ನಡೆಸಿದ್ದು...
ಶಿವಸೇನೆ
ಶಿವಸೇನೆ
ಮುಂಬೈ: 2019 ರ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಣಯ ಕೈಗೊಂಡಿರುವ ಶಿವಸೇನೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತೊಮ್ಮೆ ಟೀಕಾಪ್ರಹಾರ ನಡೆಸಿದ್ದು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಹ್ಮದಾಬಾದ್ ಗೆ ಕರೆದೊಯ್ದಿದ್ದರು, ಆದರೆ ಶ್ರೀನಗರದ ಲಾಲ್ ಚೌಕ್ ಗೆ ಏಕೆ ಇಲ್ಲ ಎಂದು ಪ್ರಶ್ನಿಸಿದೆ. 
ಪ್ರಧಾನಿ ನರೇಂದ್ರ ಮೋದಿ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರು ಅಹ್ಮದಾಬಾದ್ ನಲ್ಲಿ ರೋಡ್ ಶೋ ಮಾಡುವ ಬದಲು ಶ್ರೀನಗರದಲ್ಲಿ ಏಕೆ ಮಾಡಲಿಲ್ಲ, ಶ್ರೀನಗರದ ಲಾಲ್ ಚೌಕ್ ಗೆ ತೆರಳಿ ತಿರಂಗಾ ಹಾರಿಸಿದ್ದಿದ್ದರೆ ನಮ್ಮ ಪ್ರಧಾನಿ ಬಗ್ಗೆ ನಮಗೆ ಹೆಮ್ಮೆ ಇರುತ್ತಿತ್ತು ಎಂದು ಶಿವ ಸೇನೆ ಮುಖಂಡ ಉದ್ಧವ್ ಠಾಕ್ರೆ ಹೇಳಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯತೆ, ಭಾರತದ ಬಗ್ಗೆ ಹೆಚ್ಚು ಮಾನತಾಡುತ್ತಾರೆ, ಆದರೆ ಯಾವಗಲೂ ವಿದೇಶ ಸುತ್ತುತ್ತಿರುತ್ತಾರೆ ಎಂದು ಉದ್ಧವ್ ಠಾಕ್ರೆ ಆರೋಪಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com