ಸಿಕ್ಕಿಂ ಸಿಎಂ ಪವನ್ ಕುಮಾರ್ ಚ್ಯಾಮ್ಲಿಂಗ್
ದೇಶ
ಲಾಭದಾಯಕ ಹುದ್ದೆ: 14 ಎಸ್ ಡಿಎಫ್ ಶಾಸಕರ ಅನರ್ಹತೆ ಅರ್ಜಿ ಚುನಾವಣಾ ಆಯೋಗಕ್ಕೆ ರವಾನೆ
ಲಾಭದಾಯಕ ಹುದ್ದೆ ಹೊಂದಿರುವ ಆಡಳಿತರೂಢ ಸಿಕ್ಕಿಂ ಡೆಮೊಕ್ರಟಿಕ್ ಫ್ರಂಟ್(ಎಸ್ ಡಿಎಫ್)ನ 14 ಶಾಸಕರನ್ನು ಅನರ್ಹಗೊಳಿಸುವಂತೆ....
ಗ್ಯಾಂಗ್ಟೊಕ್: ಲಾಭದಾಯಕ ಹುದ್ದೆ ಹೊಂದಿರುವ ಆಡಳಿತರೂಢ ಸಿಕ್ಕಿಂ ಡೆಮೊಕ್ರಟಿಕ್ ಫ್ರಂಟ್(ಎಸ್ ಡಿಎಫ್)ನ 14 ಶಾಸಕರನ್ನು ಅನರ್ಹಗೊಳಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಸಿಕ್ಕಿಂ ರಾಜ್ಯಪಾಲ ಎನ್ ಶ್ರೀನಿವಾಸ್ ಪಾಟೀಲ್ ಅವರು ಗುರುವಾರ ಚುನಾವಣಾ ಆಯೋಗಕ್ಕೆ ರವಾನಿಸಿದ್ದಾರೆ.
ಚುನಾವಣಾ ಆಯೋಗ ದೆಹಲಿ ಆಡಳಿತರೂಢ ಆಮ್ ಆದ್ಮಿ ಪಕ್ಷದ 21 ಶಾಸಕರನ್ನು ಅನರ್ಹಗೊಳಿಸಿದ ಬೆನ್ನಲ್ಲೇ ಮಾಜಿ ಸಂಸದ ಪಹಲ್ಮಾನ್ ಸುಬ್ಬ, ನವಿನ್ ಕಿರಣ್ ಮತ್ತು ಇತರರು ಲಾಭದಾಯಕ ಹುದ್ದೆ ಹೊಂದಿದ ಆರೋಪದ ಮೇಲೆ ಎಸ್ ಡಿಎಫ್ ನ 14 ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದರು. ರಾಜ್ಯಪಾಲರು ಈಗ ಅದನ್ನು ಚುನಾವಣಾ ಆಯೋಗಕ್ಕೆ ಕುಳುಹಿಸಿದ್ದಾರೆ.
ಎಸ್ ಡಿಎಫ್ 14 ಶಾಸಕರು ಸಂಸದೀಯ ಕಾರ್ಯದರ್ಶಿಗಳಾಗಿ ನೇಮಕಗೊಳ್ಳುವ ಮೂಲಕ ಲಾಭದಾಯಕ ಹುದ್ದೆ ಹೊಂದಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.


