ಗ್ರೈನೇಡ್
ದೇಶ
ಗ್ರೈನೇಡ್ ರೀತಿ ಕಾಣುವ ಪವರ್ ಬ್ಯಾಂಕ್ ಕಂಡು ದಂಗಾದ ದೆಹಲಿ ವಿಮಾನ ಭದ್ರತಾ ಸಿಬ್ಬಂದಿ
ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕನೊಬ್ಬ ಗ್ರೈನೇಡ್ ರೀತಿ ಕಾಣುವ ಪವರ್ ಬ್ಯಾಂಕ್ ತಂದಿದ್ದು ಇದು ಕೆಲಕಾಲ ಆಂತಕ್ಕೆ ಕಾರಣವಾಗಿತ್ತು...
ನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕನೊಬ್ಬ ಗ್ರೈನೇಡ್ ರೀತಿ ಕಾಣುವ ಪವರ್ ಬ್ಯಾಂಕ್ ತಂದಿದ್ದು ಇದು ಕೆಲಕಾಲ ಆಂತಕ್ಕೆ ಕಾರಣವಾಗಿತ್ತು.
ದೆಹಲಿಯ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಓರ್ವ ವ್ಯಕ್ತಿ ದೆಹಲಿಯಿಂದ ಅಹಮದಾಬಾದ್ ಗೆ ತೆರಳಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು ಈ ವೇಳೆ ಆತನನ್ನು ಪರಿಶೀಲಿಸಿದ ಭದ್ರತಾ ಸಿಬ್ಬಂದಿ ಆತನ ಬಳಿಯಿದ್ದ ಗ್ರೈನೇಡ್ ಕಂಡು ಕೂಡಲೇ ಎಚ್ಚೆತ್ತುಕೊಂಡಿದ್ದಾರೆ.
ಆತನಿಂದ ಗ್ರೈನೇಡ್ ವಶಪಡಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಎಲ್ಲರೂ ಆಶ್ಚರ್ಯ್ ಚಕಿತರಾದರು. ಕಾರಣ ಅದು ಗ್ರೈನೇಡ್ ಅಲ್ಲ ಮೊಬೈಲ್ ಚಾರ್ಚ್ ಮಾಡುವ ಪವರ್ ಬ್ಯಾಂಕ್ ಆಗಿತ್ತು.
ಭದ್ರತಾ ಸಿಬ್ಬಂದಿಗಳು ಆತನ ಬ್ಯಾಗ್ ಅನ್ನು ಸಂಪೂರ್ಣವಾಗಿ ಶೋಧ ನಡೆಸಿದ ಬಳಿಕ ಆತನಿಗೆ ವಿಮಾನವನ್ನು ಹತ್ತಲು ಅನುಮತಿ ನೀಡಿದರು.

