ಇಂಪಾಲ(ಮಣಿಪುರ): ದೇಶ 69ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿದ್ದರೆ ಅತ್ತ ಮಣಿಪುರದಲ್ಲಿ ಮಹಿಳೆ ಸೇರಿದಂತೆ ಇಬ್ಬರು ಉಗ್ರರನ್ನು ಭದ್ರತಾ ಪಡೆ ಯೋಧರು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂಪಾಲ ಜಿಲ್ಲೆಯ ವಾಂಗ್ಖೈ ಆಂಡ್ರೊ ಪಾರ್ಕಿಂಗ್ ಕಾಂಗ್ಲೀಪಾಕ್ ಜನರ ಕ್ರಾಂತಿಕಾರಿ ಪಕ್ಷ(ಪಿಆರ್ಒ) ಸಂಘಟನೆಗೆ ಸೇರಿದ ಉಗ್ರರನ್ನು ಬಂಧಿಸಲಾಗಿದೆ ಎಂದು ಮಣಿಪುರ ಪೊಲೀಸರು ತಿಳಿಸಿದ್ದಾರೆ.
ನಿಷೇಧಿತ ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್(ಯುಎನ್ಎಲ್ಎಫ್) ಸಂಘಟನೆಗೆ ಸೇರಿದ ಮತ್ತೊಬ್ಬ ಉಗ್ರನನ್ನು ಮಣಿಪುರ ಪೊಲೀಸರು ಮತ್ತು ಅಸ್ಸಾಂ ರೈಫಲ್ ನಡೆಸಿದ ಜಂಟಿ ಕಾರ್ಯಾಚರಣೆ ವೇಳೆ ಕಳೆದ ಬುಧವಾರ ಬಂಧಿಸಲಾಗಿತ್ತು ಪೊಲೀಸರು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.