ಮಹಿಳೆಗೆ ಬಲವಾದ ಆತ್ಮವಿಶ್ವಾಸವಿದ್ದಲ್ಲಿ ಯಾವುದೂ ಅಸಾಧ್ಯವಲ್ಲ: ನರೇಂದ್ರ ಮೋದಿ

"ಮಹಿಳೆಯೊಬ್ಬಳಿಗೆ ಬಲವಾದ ಆತ್ಮವಿಶ್ವಾಸವಿದ್ದಲ್ಲಿ ಯಾವುದೂ ಅಸಾಧ್ಯವಲ್ಲ" ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.
ಕಲ್ಪನಾ ಚಾವ್ಲಾ
ಕಲ್ಪನಾ ಚಾವ್ಲಾ
ನವದೆಹಲಿ: "ಮಹಿಳೆಯೊಬ್ಬಳಿಗೆ ಬಲವಾದ ಆತ್ಮವಿಶ್ವಾಸವಿದ್ದಲ್ಲಿ ಯಾವುದೂ ಅಸಾಧ್ಯವಲ್ಲ" ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು. 2018ರ ಮೊದಲ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಫೆಬ್ರವರಿ 1ರ ಗಗನಯಾತ್ರಿ ಕಲ್ಪಾನಾ ಚಾವ್ಲಾ ಪುಣ್ಯದಿನದ ಸ್ಮರಣಾರ್ಥ ಚಾವ್ಲಾ ಸಾಧನೆಯನ್ನು ಸ್ಮರಿಸಿದ ಮೋದಿ, "ಎಲ್ಲ ಭಾರತೀಯರಿಗೆ, ವಿಶೇಷವಾಗಿ ಯುವತಿಯರಿಗೆ ಅವರು ಅಮೂಲ್ಯವಾದ ಸಂದೇಶವನ್ನು ನೀಡಿದ್ದಾರೆ" ಎಂದರು. ಭಾರತದಲ್ಲಿ ಮಹಿಳೆಯರು ಪ್ರತಿ ಕ್ಷೇತ್ರದಲ್ಲಿಯೂ ಪ್ರಗತಿ ಸಾಧಿಸುತ್ತಿದ್ದಾರೆ ತನ್ಮೂಲಕ ಇಡೀ ಜಗತ್ತನ್ನು ಅಚ್ಚರಿಗೊಳಿಸಿದ್ದಾರೆ ಅವರು ಒತ್ತಿ ಹೇಳಿದರು, ಪವಿತ್ರ ವೇದಗಳ ಹಲವಾರು ಶ್ಲೋಕಗಳನ್ನು ಮಹಿಳೆಯರು ರಚಿಸಿದ್ದಾರೆ ಎಂದು ಪ್ರಧಾನಿ ಹೇಳಿದರು.
"ಒಬ್ಬ ಮಗಳೆಂದರೆ ಹತ್ತು ಗಂಡು ಮಕ್ಕಳಿಗೆ ಸಮ. ಹತ್ತು ಗಂಡು ಮಕ್ಕಳಿಂದ ನಾವು ಪಡೆಯಬಹುದಾಗಿದ್ದ ಪಣ್ಯವನ್ನು ಒಬ್ಬ ಮಗಳಿಂದ ಪಡೆಯಲು ಸಾಧ್ಯ" ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮೋದಿ ಹೇಳಿದ್ದಾರೆ.
ಮೋರ್ನಾ ನದಿ ಶುದ್ದೀಕರಣ ಮಿಷನ್
"ವ್ಯಕ್ತಿಯು ಏನನ್ನಾದರೂ ಮಾಡಲು ನಿರ್ಧರಿಸಿದರೆ, ಯಾವುದೂ ಅಸಾಧ್ಯವಲ್ಲ ಎನ್ನುವುದನ್ನು  ಮೋರ್ನಾ ನದಿ ಶುದ್ದೀಕರಣ ಮಿಷನ್ ತೋರಿಸಿದೆ. ಇಂತಹಾ ಶ್ರೇಷ್ಠ ಕೆಲಸದಲ್ಲಿ, ಅಕೋಲಾದ ಆರು ಸಾವಿರ ನಾಗರಿಕರು, 100 ಕ್ಕಿಂತ ಹೆಚ್ಚು ಎನ್ ಜಿಓ ಗಳು, ಕಾಲೇಜು ವಿದ್ಯಾರ್ಥಿಗಳು, ಮಕ್ಕಳು, ಹಿರಿಯ ನಾಗರಿಕರು, ತಾಯಂದಿರು ಮತ್ತು ಸಹೋದರಿಯರು ಭಾಗವಹಿಸಿದ್ದಾರೆ. "
ಮಹಾರಾಷ್ಟ್ರದ ಮೋರ್ನಾ ನದಿಯ ಸ್ವಚ್ಚತಾ ಕಾರ್ಯಕ್ಕಾಗಿ ಅಕೋಲಾದ ಜನರಿಂದ ಪ್ರಾರಂಭಿಸಲ್ಪಟ್ಟ ಅಭಿಯಾನ ಮೋರ್ನಾ ನದಿ ಶುದ್ದೀಕರಣ ಮಿಷನ್ ಕುರಿತು ಪ್ರಧಾನಿ ತಮ್ಮ ಮನ್ ಕಿ ಬಾತ್ ನಲ್ಲಿ ಪ್ರಶಂಸಿಸಿದ್ದಾರೆ.
"ಕ್ಲೀನ್ ಮೋರ್ನಾ ಅಭಿಯಾನವನ್ನು ಜನಸಾಮಾನ್ಯ ಚಳುವಳಿಯನ್ನಾಗಿ ಮಾಡಿದ ಜನರನ್ನು ನಾನು ಅಭಿನಂದಿಸುತ್ತೇನೆ. ಅಕೋಲಾ ನಾಗರಿಕರು 'ಸ್ವಚ್ಚ ಭಾರತ ಅಭಿಯಾನ' ಅಡಿಯಲ್ಲಿ ಮೊರ್ನಾ ನದಿಯನ್ನು ಸ್ವಚ್ಚಗೊಳಿಸುವ ಶುಚಿತ್ವ ಕಾರ್ಯಾಚರಣೆಯಲ್ಲಿ ತೊಡಗಿರುವ ಬಗೆಗೆ ನನಗೆ ಸಂತಸವಿದೆ" ಪ್ರಧಾನಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com