ಅಫ್ಘಾನಿಸ್ತಾನದ ಉತ್ತರ ಪ್ರಾಂತ್ಯವನ್ನು ಪ್ರವೇಶಿಸುತ್ತಿದ್ದ ಉಗ್ರರ ತಂಡವನ್ನು ತಡೆದಾಗ ಮಗುವಿನಲ್ಲಿ ಬಾಂಬ್ ಇಟ್ಟಿದ್ದು ಬೆಳಕಿಗೆ ಬಂದಿದೆ. ಅಫ್ಘಾನಿಸ್ತಾನದ ಸ್ವತಂತ್ರ ಮಾನವ ಹಕ್ಕು ಆಯೋಗದ ಮುಖ್ಯಸ್ಥರಾದ ಸೋವಿತಾ ಅಬ್ಲುರಾಹಿಜಾಯ್ ಈ ಬಗ್ಗೆ ಮಾಹಿತಿ ನೀಡಿದ್ದು, ಸಶಸ್ತ್ರ ಹೋರಾಟದಲ್ಲಿ ಮಕ್ಕಳನ್ನು ಬಳಕೆ ಮಾಡುವುದು ಅತ್ಯಂತ ಕ್ರೂರ, ಇಸ್ಲಾಮ್ ನ ಶರಿಯಾದಲ್ಲೂ ಇದನ್ನು ನಿಷೇಧಿಸಲಾಗಿದ್ದು, ದೇಶದ ಕಾನೂನಿನ ಪ್ರಕಾರವೂ ಇದನ್ನು ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.