ಮಧ್ಯಪ್ರದೆಶದ ಮಂಡ್ಸಾರ್ ನಲ್ಲಿ 7 ವರ್ಷದ ಬಾಲಕಿಯ ಮೇಲೆ ಇರ್ಫಾನ್ ಖಾನ್ (20) ಆಸೀಫ್ (24) ಭೀಕರವಾಗಿ ಅತ್ಯಾಚಾರ ನಡೆಸಿದ್ದರು. ನಿರ್ಭಯಾ ಪ್ರಕರಣದ ಮಾದರಿಯಲ್ಲೆ 7 ವರ್ಷದ ಬಾಲಕಿಯ ಮರ್ಮಾಂಗವನ್ನು ಘಾಸಿಗೊಳಿಸಿದ್ದ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಜಾರಿಯಾಗಬೇಕೆಂಬ ಒತ್ತಾಯ ದೇಶಾದ್ಯಂತ ಕೇಳಿಬರುತ್ತಿದ್ದರೆ, ಬಿಜೆಪಿ ನಾಯಕ ಸಂಜೀವ್ ಮಿಶ್ರಾ ಗ್ಯಾಂಗ್ ರೇಪ್ ಆರೋಪಿಗಳ ಶಿರಚ್ಛೇಧ ಮಾಡಿದವರಿಗೆ 5 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.