ಅನುದಾನಿತ ಶಾಲೆಗಳಲ್ಲಿ ಮೂಲಸೌಕರ್ಯ ಕೊರತೆ: ಎಎಪಿ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ತರಾಟೆ

ದೆಹಲಿಯ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ನೀರು, ಶೌಚಾಲಯದಂತಹಾ ಮೂಲಭೂತ ಸೌಕರ್ಯ ಕೊರತೆ ಇದ್ದು ಈ ಸಂಬಂಧ ದೆಹಲಿ ಹೈಕೋರ್ಟ್ ಇಂದು ಎಎಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಅನುದಾನಿತ ಶಾಲೆಗಳಲ್ಲಿ ಮೂಲಸೌಕರ್ಯ ಕೊರತೆ: ಎಎಪಿ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ತರಾಟೆ
ಅನುದಾನಿತ ಶಾಲೆಗಳಲ್ಲಿ ಮೂಲಸೌಕರ್ಯ ಕೊರತೆ: ಎಎಪಿ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ತರಾಟೆ
Updated on
ನವದೆಹಲಿ: ದೆಹಲಿಯ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ನೀರು, ಶೌಚಾಲಯದಂತಹಾ ಮೂಲಭೂತ ಸೌಕರ್ಯ ಕೊರತೆ ಇದ್ದು ಈ ಸಂಬಂಧ ದೆಹಲಿ ಹೈಕೋರ್ಟ್ ಇಂದು ಎಎಪಿ  ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
100 ಶೇಕಡಾ ಸರ್ಕಾರಿ ಅನುದಾನಿತ ಶಾಲೆಗಳ ಮೂಲಸೌಕರ್ಯ ಕರುಣಾಜನಕ ಸ್ಥಿತಿಯಲ್ಲಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿ ಗೀತಾ ಮಿತ್ತಲ್ ಹಾಗೂ ಸಿ. ಹರಿಶಂಕರ್ ಅವರನ್ನೊಳಗೊಂಡ ಪೀಠ ಶಾಲೆಗಳಲ್ಲಿ  ನೀರು ಮತ್ತು ಶೌಚಾಲಯದ ಸೌಲಭ್ಯಗಳನ್ನು ತಕ್ಷಣವೇ ಒದಗಿಸಬೇಕು ಎಂದು ಆದೇಶಿಸಿದೆ.
ಈಶಾನ್ಯ ದೆಹಲಿಯ ಕಾರಾವಲ್ ನಗರದಲ್ಲಿರುವ ಅಲೋಕ್ ಪುಂಜ್ ಹಿರಿಯ ಪ್ರಾಥಮಿಕ ಶಾಲೆಯ ಖುದ್ದು ಪರಿಶೀಲನೆ ನಡೆಸುವಂತೆ ದೆಹಲಿ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಕೋರ್ಟ್ ಸೂಚಿಸಿದೆ. ಕೆಲ ಸಮಯದ ಕೆಳಗೆ ಒಂದು ಸಹಕಾರಿ ಸಂಘಟನೆ ನಡೆಸುತ್ತಿದ್ದ ಅಲೋಕ್ ಪುಂಜ್ ಹಿರಿಯ ಪ್ರಾಥಮಿಕ  ಶಾಲೆಯನ್ನು ಇತ್ತೀಚೆಗೆ ಸರ್ಕಾರ ವಶಕ್ಕೆ ಪಡೆದುಕೊಂಡಿತ್ತು. ನ್ಯಾಯಾಲಯ ಸಧ್ಯ ಈ ಶಾಲೆಯ ಖುದ್ದು ಸಮೀಕ್ಷೆ ಅನ್ಡೆಸಿ ಹತ್ತು ದಿನಗಳಲ್ಲಿ ವರದಿ ನೀಡಿ ಎಂದು ಇಲಾಖಾ ಅಧಿಕಾರಿಗಳಿಗೆ ನಿರ್ದೇಶನ ನಿಡಿದೆ.
ಕೋರ್ಟ್ ಮುಂದಿನ ವಿಚಾರಣೆಯನ್ನು ಜುಲೈ 30ಕ್ಕೆ ನಿಗದಿಪಡಿಸಿ ಆದೇಶಿಸಿದೆ.
ಸಾಮಾಜಿಕ ಕೆಲಸಕ್ಕೆ ಹೆಸರಾದ ಎನ್.ಜಿ.ಒ ಸೋಶಿಯಲ್ ಜ್ಯೂರಿಸ್ಟ್ ರಿಂದ ವಕೀಲರಾದ ಅಶೋಕ್ ಅಗರ್ವಾಲ್ ಮುಖೇನ ದೆಹಲಿ ಸರ್ಕಾರಕ್ಕೆ ಈ ಸಂಬಂಧ ನೊಟೀಸ್ ಜಾರಿ ಮಾಡೀದ್ದರು.ಶಿಕ್ಷಕರು ಹಾಗೂ  2,600 ಕ್ಕಿಂತಲೂ ಹೆಚ್ಚಿನ  ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕೆಂದು ನೋಟೀಸ್ ನಲ್ಲಿ ಮನವಿ ಮಾಡಲಾಗಿತ್ತು.
ಇದಲ್ಲದೆ ದೆಹಲಿ ಶಾಲೆಗಳಲ್ಲಿ ಒಟ್ಟು 72 ಶಿಕ್ಷಕರ ಹುದ್ದೆ ಕಾಲಿ ಇದೆ. ಸಾಕಷ್ಟು ಬೋಧನಾ ವರ್ಗದ ನೇಮಕಾತಿಯೂ ಅಗತ್ಯವಿದೆ. ಇನ್ನು ಶಾಲಾ ಮಕ್ಕಳು ಆಟವಾಡಲು ಇರುವ ಆಟದ ಮೈದಾನದಲ್ಲಿ ಮನೆಗಳ ಕಸ ಎಸೆದು ಅದನ್ನು ಡಂಪಿಂಗ್ ಯಾರ್ಡ್ ಮಾಡಿಕೊಳ್ಳಲಾಗಿದೆ ಎಂದು ಎನ್ಜಿಒ ತನ್ನ ಅರ್ಜಿಯಲ್ಲಿ ದೂರಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com