ಕೇರಳ: ಪಾದ್ರಿಗಳಿಂದ ಲೈಂಗಿಕ ಕಿರುಕುಳ, ನಾಲ್ವರ ವಿರುದ್ಧ ಪ್ರಕರಣ ದಾಖಲು
ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಹಿನ್ನೆಲೆಯಲ್ಲಿ ಮಲಂಕರ ಸಿರಿಯನ್ ಆರ್ಥೋಡಾಕ್ಸ್ ಚರ್ಚ್ ಗೆ ಸೇರಿದ್ದ ನಾಲ್ವರು ಪಾದ್ರಿಗಳ ಮೇಲೆ ಕೇರಳ ಕ್ರೈಂ ಬ್ರ್ಯಾಂಚ್ ಪೋಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.
ಕೇರಳ: ಪಾದ್ರಿಗಳಿಂದ ಲೈಂಗಿಕ ಕಿರುಕುಳ, ನಾಲ್ವರ ವಿರುದ್ಧ ಪ್ರಕರಣ ದಾಖಲು
ಕೊಚ್ಚಿನ್(ಕೇರಳ): ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಹಿನ್ನೆಲೆಯಲ್ಲಿ ಮಲಂಕರ ಸಿರಿಯನ್ ಆರ್ಥೋಡಾಕ್ಸ್ ಚರ್ಚ್ ಗೆ ಸೇರಿದ್ದ ನಾಲ್ವರು ಪಾದ್ರಿಗಳ ಮೇಲೆ ಕೇರಳ ಕ್ರೈಂ ಬ್ರ್ಯಾಂಚ್ ಪೋಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.
ಸಂತ್ರಸ್ತೆಯ ಹೇಳಿಕೆ ದಾಕಲಿಸಿಕೊಂಡ ಬಳಿಕ ಪೋಲೀಸರು ನಾಲ್ವರು ಪಾದ್ರಿಗಳ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ ಎಂದು ಪೋಲೀಸರು ಮಾಹಿತಿ ತಿಳಿಸಿದರು. ಇಷ್ಟಕ್ಕೂ ಮೂಲಗಳಿಂದ ಹೆಚ್ಚಿನ ವಿವರಗಳು ಬಹಿರಂಗವಾಗಿಲ್ಲ
ಕೇರಳದ ಪತನಂತಿಟ್ಟ ಜಿಲ್ಲೆಯ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಮಲಂಕರ ಚರ್ಚ್ ಪಾದ್ರಿಗಳು ರಹಸ್ಯವಾಗಿ ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುತ್ತಿದ್ದಾರೆ. ಹಾಗೆಯೇ ಈ ವಿಷಯ ಬಹಿರಂಗಪಡಿಸದಂತೆ ಆಕೆಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಕಳೆದ ತಿಂಗಳು ಆರೋಪಿಸಿದ್ದರು.
ಆದರೆ ಈ ವ್ಯಕ್ತಿಯ ದನಿ ಇರುವ ಆಡಿಯೋ ಕ್ಲಿಪ್ ಸಾಮಾಜಿಕ ತಾಣಗಳಲ್ಲಿ ವೈರಲ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ. ತನಿಖಾ ತಂಡವು ಸಂತ್ರಸ್ತೆಯ ಪತಿ ಹೇಳಿಕೆಯನ್ನು ಈ ಮುನ್ನವೇ ದಾಖಲಿಸಿಕೊಂಡಿದೆ.
ಸಂತ್ರಸ್ತೆಯ ಪತಿ ಪಾದ್ರಿಗಳ ವಿರುದ್ಧ ತನ್ನ ಬಳ್ಲಿ ಇದ್ದ ಸಾಕ್ಷಗಳನ್ನು ಪೋಲೀಸರಿಗೆ ಹಸ್ತಾಂತರಿಸಿದ್ದಾರೆ. ಇದರಂತೆ ಕೇರಳ ರಾಜ್ಯ ಪೋಲೀಸ್ ಆಯುಕ್ತ ಲೋಕನಾಥ್ಬೆಹಾರ ಕಳೆದ ವಾರ ಪ್ರಕರಣವನ್ನು ಕರಿಂ ಬ್ರ್ಯಾಂಚ್ ತನಿಖೆಗೆ ಆದೇಶಿಸಿದ್ದಾರೆ.
ಇದೇ ವೇಳೆ ಸಿಪಿಐ (ಎಂ) ನಾಯಕ ಮತ್ತು ಕೇರಳ ಆಡಳಿತ ಸುಧಾರಣೆ ಆಯೋಗದ ಅಧ್ಯಕ್ಷ ವಿ. ಎಸ್. ಅಚ್ಯುತಾನಂದನ್ ಮತ್ತು ರಾಷ್ಟ್ರೀಯ ಮಹಿಳಾ ಆಯೋಗ (ಎನ್ಸಿಡಬ್ಲ್ಯು) ಆರೋಪಿಗಳಿಗೆ ಕಠಿಣ ಶಿಕ್ಷೆ ಒದಗಿಸುವಂತೆ, ಪ್ರಾಮಾಣಿಕ ತನಿಖೆ ನಡೆಸುವಂತೆಯೂ ಬೆಹಾರ ಅವರಿಗೆ ಒತ್ತಾಯಿಸಿದ್ದಾರೆ.
ಕ್ರೈಂ ಬ್ರ್ಯಾಂಚ್ ಇನ್ಸ್ ಪೆಕ್ಟರ್ ಜನರಲ್ ಎಸ್. ಶ್ರೀಜಿತ್ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ.