ನವದೆಹಲಿ:ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ದೇಶಾದ್ಯಂತ ಅರಾಜಕತೆ ತಾಂಡವವಾಡುತ್ತಿದ್ದು, ಜಂಗಲ್ ರಾಜ್ ನರೇಂದ್ರಮೋದಿ ಅವರ ನವ ಭಾರತದ ಹೊಸ ಚಿಹ್ನೆಯಾಗಲಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಒಂದು ತಿಂಗಳ ಅವಧಿಯಲ್ಲಿ ದೇಶಾದ್ಯಂತ 28 ಕೊಲೆಗಳು ನಡೆದಿವೆ. ಪ್ರತಿದಿನ ಒಂದೊಂದು ಕೊಲೆಯಾಗುತ್ತಿದೆ. ಸ್ವಾತಂತ್ರ್ಯ ನಂತರದ 70 ವರ್ಷಗಳಲ್ಲಿ ಇಂತಹ ಸ್ಥಿತಿಯನ್ನು ದೇಶ ಕಂಡಿರಲಿಲ್ಲ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಅಪಾದಿಸಿದ್ದಾರೆ.
Advertisement