ನವದೆಹಲಿ: ಲೋಕ್ ಪಾಲ್ ನೇಮಕಕ್ಕೆ ಸಂಬಂಧಿಸಿದಂತೆ 10 ದಿನಗಳಲ್ಲಿ ವಿವರ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ನ್ಯಾ.ರಂಜನ್ ಗೊಗೋಯ್ ಹಾಗೂ ಆರ್ ಬಾನುಮತಿ ಅವರಿದ್ದ ವಿಭಾಗೀಯ ಪೀಠ 10 ದಿನಗಳಲ್ಲಿ ಈ ಬಗ್ಗೆ ಪ್ರಮಾನ ಪತ್ರ ಸಲ್ಲಿಸಲು ಸೂಚನೆ ನೀಡಿದ್ದು, ಲೋಕ್ ಪಾಲ್ ನೇಮಕಕ್ಕೂ ಮುನ್ನ ಕೈಗೊಳ್ಳುವ ಕ್ರಮಗಳ ಬಗ್ಗೆ ವಿವರಣೆ ನೀಡುವಂತೆ ಕೇಳಿದೆ. ಲೋಕ್ ಪಾಲ್ ನೇಮಕ ವಿಚಾರದಲ್ಲಿ ಸರ್ಕಾರ ಈಗಾಗಲೇ ಹೊರಡಿಸಿರುವ ಸೂಚನೆಗಳ ಬಗ್ಗೆ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಕೋರ್ಟ್ ಗೆ ಮಾಹಿತಿ ನೀಡಿದ್ದು, ಮುಂದಿನ ವಿಚಾರಣೆಯನ್ನು ಜು.17 ಕ್ಕೆ ಮುಂದೂಡಲಾಗಿದೆ.
ಕಳೆದ ವರ್ಷ ಏ.27 ರಂದು ಸುಪ್ರೀಂ ಕೋರ್ಟ್ ನೀಡಿದ್ದ ಆದೆಶದ ಹೊರತಾಗಿಯೂ ಭ್ರಷ್ಟಾಚಾರ ತಡೆಗೆ ಲೋಕ್ ಪಾಲ್ ನ್ನು ನೇಮಕ ಮಾಡದೇ ಇರುವುದನ್ನು ಪ್ರಶ್ನಿಸಿ ಕಾಮನ್ ಕಾಸ್ ಎಂಬ ಎನ್ ಜಿಒ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯುತ್ತಿದೆ.