ಹಿಂದೂಗಳ ಪವಿತ್ರ ಗ್ರಂಥ ರಾಮಾಯಣ ಉರ್ದುವಿಗೆ ಅನುವಾದಿಸಿದ ಮುಸ್ಲಿಂ ಶಿಕ್ಷಕಿ!

ಮುಸ್ಲಿಂ ಶಿಕ್ಷಕಿ ಮಾಹಿ ತಲಾತ್ ಸಿದ್ಧಿಕಿ ಕೋಮುಸೌಹಾರ್ದದ ಸಂದೇಶ ಸಾರು ಉದ್ದೇಶದಿಂದ ಹಿಂದೂಗಳ ಪವಿತ್ರ ಗ್ರಂಥ ರಾಮಾಯಣವನ್ನು ಉರ್ದು ಭಾಷೆಗೆ ಅನುವಾದಿಸಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕಾನ್ಪುರ: ಮುಸ್ಲಿಂ ಶಿಕ್ಷಕಿ ಮಾಹಿ ತಲಾತ್ ಸಿದ್ಧಿಕಿ ಕೋಮುಸೌಹಾರ್ದದ ಸಂದೇಶ ಸಾರು ಉದ್ದೇಶದಿಂದ ಹಿಂದೂಗಳ ಪವಿತ್ರ ಗ್ರಂಥ ರಾಮಾಯಣವನ್ನು ಉರ್ದು ಭಾಷೆಗೆ ಅನುವಾದಿಸಿದ್ದಾರೆ. 
ಮುಸ್ಲಿಂ ಸಮುದಾಯದವರು ರಾಮಾಯಣದಲ್ಲಿನ ಅನೇಕ ಉತ್ತಮ ಸಂದೇಶಗಳನ್ನು ತಿಳಿಯಲು ಅನುಕೂಲವಾಗಲಿ ಎಂದು ಈ ಕಾರ್ಯ ಮಾಡಿದ್ದೇನೆ. ಅನುವಾದ ಕಾರ್ಯಕ್ಕೆ ಎರಡು ವರ್ಷ ಹಿಡಿಯಿತು. ಶಾಂತಿ ಮತ್ತು ಭ್ರಾತೃತ್ವ ಸಾರುವ ಅನೇಕ ವಿಚಾರಗಳು ರಾಮಾಯಣದಲ್ಲಿದೆ. ಮೂಲ ಅರ್ಥದಲ್ಲಿ ಬದಲಾವಣೆಯಾಗಂತೆತ ಅನುವಾದ ಸಂದರ್ಭದಲ್ಲಿ ಎಚ್ಚರವಹಿಸಿದ್ದೆ ಎಂದು ತಲಾತ್ ಹೇಳಿದ್ದಾರೆ. 
ಕಾನ್ಪುರ ನಿವಾಸಿ ಬದ್ರಿ ನಾರಾಯಣ ತಿವಾರಿ ಎಂಬುವರು ತಲಾತ್ ಗೆ ರಾಮಾಯಣದ ಪ್ರತಿ ನೀಡಿ ಉರ್ದುಗೆ ಅನುವಾದಿಸಲು ಸೂಚಿಸಿದ್ದರಂತೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com