ಪಿ. ಜೆ. ಕುರಿಯನ್
ಪಿ. ಜೆ. ಕುರಿಯನ್

ವೆಂಕಯ್ಯನಾಯ್ಡು, ಸುಷ್ಮಾ ಸ್ವರಾಜ್ ಅವರಿಂದ ಪಿಜೆ ಕುರಿಯೆನ್ ಗೆ ಬೀಳ್ಗೂಡುಗೆ

ರಾಜ್ಯಸಭೆಯ ನಿರ್ಗಮಿತ ಉಪ ಸಭಾಪತಿ ಪಿ. ಜೆ. ಕುರಿಯೆನ್ ಅವರಿಗೆ ಸಭಾಪತಿ ವೆಂಕಯ್ಯನಾಯ್ಡು ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಬೀಳ್ಕೂಟ್ಟರು.
Published on

ನವದೆಹಲಿ: ರಾಜ್ಯಸಭೆಯ ನಿರ್ಗಮಿತ ಉಪ ಸಭಾಪತಿ ಪಿ. ಜೆ. ಕುರಿಯನ್ ಅವರಿಗೆ  ಸಭಾಪತಿ ವೆಂಕಯ್ಯನಾಯ್ಡು ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಬೀಳ್ಕೂಟ್ಟರು.

ಸಮಾರಂಭವನ್ನುದ್ದೇಶಿಸಿ  ಮಾತನಾಡಿದ ವೆಂಕಯ್ಯನಾಯ್ಡು, ಬಹು ವ್ಯಕ್ತಿತ್ವದ ಪಿ. ಜಿ. ಕುರಿಯನ್ ಉಪಸಭಾಪತಿಯಾಗಿ  ಕಾರ್ಯಕಲಾಪಗಳು  ಪರಿಣಾಮಕಾರಿಯಾಗಿ ನಡೆಯುವಲ್ಲಿ ಪ್ರಾಮಾಣಿಕ ರೀತಿಯಲ್ಲಿ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.

 ಪಿ. ಜೆ. ಕುರಿಯನ್ ಮಾತನಾಡಿ, ಸದನದಲ್ಲಿ ಕಲಾಪಕ್ಕೆ ಅಡ್ಡಿ ಉಂಟುಮಾಡುವುದಕ್ಕೆ  ಅತೃಪ್ತಿ ವ್ಯಕ್ತಪಡಿಸಿದರು. ಸಂಸತ್ತಿನಲ್ಲಿ ಕಾರ್ಯಕಲಾಪಕ್ಕೆ ಅಡ್ಡಿಯಿಂದ ದೇಶಕ್ಕೆ ನಷ್ಟವಾಗುತ್ತದೆ. ಇಂತಹ ಪ್ರವೃತ್ತಿಗಳು ಉಂಟಾಗದಂತೆ ಆಡಳಿತಾ ಹಾಗೂ ಪ್ರತಿಪಕ್ಷಗಳು ಕೂತು ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

 ಕೇಂದ್ರ ಸಚಿವ ರವಿಶಂಕರ್ ಪ್ರಸಾದ್,  ಪಿಯೂಷ್ ಗೋಯೆಲ್,  ವಿಜಯ್ ಗೋಯೆಲ್ ,ಕಾಂಗ್ರೆಸ್ ಮುಖಂಡ ಗುಲಾಂ ನಬೀ ಅಜಾದ್ ಸೇರಿದಂತೆ ಹಲವು ಸದಸ್ಯರು ಈ ಸಮಾರಂಭದಲ್ಲಿ  ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com