ಲಖನೌ ಪಾಸ್ಪೋರ್ಟ್ ವಿವಾದ: ಅಧಿಕಾರದ ವ್ಯಾಪ್ತಿಯನ್ನು ಮೀರಿದ ಪಾಸ್ಪೋರ್ಟ್ ಅಧಿಕಾರಿ

ಅಂತರ್ಧರ್ಮೀಯ ವಿವಾಹವಾಗಿದ್ದ ದಂಪತಿಗಳಿಗೆ ಪಾಸ್ಪೋರ್ಟ್ ನೀಡುವುವ ಪ್ರಕ್ರಿಯೆ ವೇಳೆ ಕಿರುಕುಳ ಆರೋಪ ನೀಡಿದ್ದ ಪಾಸ್ಪೋರ್ಟ್ ಅಧಿಕಾರಿ ವಿಕಾಸ್ ಮಿಶ್ರಾ ತಮ್ಮ ಅಧಿಕಾರದ ವ್ಯಾಪ್ತಿಯನ್ನು ಮೀರಿದ್ದಾರೆ.
ಲಖನೌ ಪಾಸ್ಪೋರ್ಟ್ ವಿವಾದ: ಅಧಿಕಾರದ ವ್ಯಾಪ್ತಿಯನ್ನು ಮೀರಿದ ಪಾಸ್ಪೋರ್ಟ್ ಅಧಿಕಾರಿ
ಲಖನೌ ಪಾಸ್ಪೋರ್ಟ್ ವಿವಾದ: ಅಧಿಕಾರದ ವ್ಯಾಪ್ತಿಯನ್ನು ಮೀರಿದ ಪಾಸ್ಪೋರ್ಟ್ ಅಧಿಕಾರಿ
ಲಖನೌ: ಅಂತರ್ಧರ್ಮೀಯ ವಿವಾಹವಾಗಿದ್ದ ದಂಪತಿಗಳಿಗೆ ಪಾಸ್ಪೋರ್ಟ್ ನೀಡುವುವ ಪ್ರಕ್ರಿಯೆ ವೇಳೆ ಕಿರುಕುಳ ಆರೋಪ ನೀಡಿದ್ದ ಪಾಸ್ಪೋರ್ಟ್ ಅಧಿಕಾರಿ ವಿಕಾಸ್ ಮಿಶ್ರಾ ತಮ್ಮ ಅಧಿಕಾರದ ವ್ಯಾಪ್ತಿಯನ್ನು ಮೀರಿದ್ದಾರೆ. ಈ ಮಾಹಿತಿ ವಿದೇಶಾಂಗ ಇಲಾಖೆಯ ಆಂತರಿಕ ತನಿಖೆಯಿಂದ  ಬಹಿರಂಗಗೊಂಡಿದೆ. 
ತನ್ವಿ ಸೇಠ್ ಹಾಗೂ ಅನಾಸ್ ಸಿದ್ದಿಕಿ ದಂಪತಿಗಳಿಗೆ ಪಾಸ್ಪೋರ್ಟ್ ನೀಡುವ ವಿಚಾರದಲ್ಲಿ ಉಂಟಾಗಿದ್ದ ವಿವಾದ ದೇಶಾದ್ಯಂತ ಸದ್ದು ಮಾಡಿದ್ದು, ಪಾಸ್ಪೋರ್ಟ್ ಅಧಿಕಾರಿ ತಮಗೆ ಕಿರುಕುಳ ನೀಡಿದ್ದಾರೆ ಎಂದು ಸೇಠ್ ಆರೋಪಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶಾಂಗ ಇಲಾಖೆ ಆಂತರಿಕ ತನಿಖೆ ನಡೆಸಿದ್ದು, ವಿದೇಶಾಂಗ ಇಲಾಖೆ ಅಧಿಕಾರಿ ತಮ್ಮ ಅಧಿಕಾರದ ವ್ಯಾಪ್ತಿಯನ್ನು ಮೀರಿರುವುದು ತನಿಖೆಯಿಂದ ಬಹಿರಂಗಗೊಂಡಿದೆ. 
ಪಾಸ್ಪೋರ್ಟ್ ಪಡೆಯುವುದಕ್ಕೆ ಸರ್ಕಾರಕ್ಕೆ ಸಲ್ಲಿಸಬೇಕಾದ ಅಗತ್ಯ ದಾಖಲಾತಿಗಳನ್ನು ಸೇಠ್ ಹಾಗೂ ಸಿದ್ದಿಕಿ ಸಲ್ಲಿಸಿದ್ದರು, ಅಷ್ಟೇ ಅಲ್ಲದೇ ಅವರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ ಎಂದು ಆಂತರಿಕ ತನಿಖೆಯಿಂದ ದೃಢಪಟ್ಟಿದೆ. ತನ್ವಿ ಸೇಠ್ ಅವರು ಪಾಸ್ಪೋರ್ಟ್ ಗೆ ಸಲ್ಲಿಸಿದ್ದ ಅರ್ಜಿ ಹಾಗೂ ಆಕೆ ಇದ್ದ ವಿಳಾಸ ಹೊಂದಾಣಿಕೆಯಾಗುತ್ತಿರಲಿಲ್ಲ ಎಂದು ಪಾಸ್ಪೋರ್ಟ್ ಅಧಿಕಾರಿ ವಿಕಾಸ್ ಮಿಶ್ರಾ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು. ಆದರೆ ಈಗ ಅಧಿಕಾರದ ವ್ಯಾಪ್ತಿಯನ್ನು ಮೀರಿ ಪಾಸ್ಪೋರ್ಟ್ ಅಧಿಕಾರಿ ನಡೆದುಕೊಂಡಿದ್ದಾರೆ ಎಂಬುದು ಆಂತರಿಕ ತನಿಖೆಯಿಂದ ಬಹಿರಂಗವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com