ಅಸ್ಸಾಂ ಸೇನೆಯಿಂದ ಮೂವರು ಸಾಧುಗಳ ರಕ್ಷಣೆ
ಅಸ್ಸಾಂ ಸೇನೆಯಿಂದ ಮೂವರು ಸಾಧುಗಳ ರಕ್ಷಣೆ

ಅಸ್ಸಾಂ: ಮಕ್ಕಳ ಕಳ್ಳರೆಂದು ತಪ್ಪು ಗ್ರಹಿಕೆ, ಸ್ಥಳೀಯರಿಂದ ಮೂವರನ್ನು ಬಚಾವ್ ಮಾಡಿದ ಸೇನೆ

ಮಕ್ಕಳ ಕಳ್ಳರೆಂದು ತಪ್ಪು ಭಾವಿಸಿ ಮೂವರು ಸಾಧುಗಳನ್ನು ಕೊಲ್ಲಲು ಯತ್ನಿಸಿದ ಘಟನೆ ಅಸ್ಸಾಂ ನ ದಿಮಾ ಹಸಾವೋ ಜಿಲ್ಲೆಯ ಮಹೂರ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ....
ಅಸ್ಸಾಂ: ಮಕ್ಕಳ ಕಳ್ಳರೆಂದು ತಪ್ಪು ಭಾವಿಸಿ ಮೂವರು ಸಾಧುಗಳನ್ನು ಕೊಲ್ಲಲು ಯತ್ನಿಸಿದ ಘಟನೆ ಅಸ್ಸಾಂ ನ ದಿಮಾ ಹಸಾವೋ ಜಿಲ್ಲೆಯ ಮಹೂರ್  ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಎಲ್ಲೆಡೆ ಮಕ್ಕಳ ಕಳ್ಳತನದ ವದಂತಿಗಳು ಹಬ್ಬುತ್ತಿದರುವ ಹಿನ್ನೆಲೆಯಲ್ಲಿ ಸಾಧುಗಳನ್ನು ಕಳ್ಳರೆಂದು ತಿಳಿದ ನೂರಾರು ಮಂದಿ ಅವರನ್ನು ಹಿಡಿದು ಥಳಿಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಧಾವಿಸಿದ ಅಸ್ಸಾಂ ಸೇನೆ ಮತ್ತು ಪೊಲೀಸ್ ಅಧಿಕಾರಿಗಳು ಜನರಿಂದ ಅವರನ್ನು ರಕ್ಷಿಸಿದ್ದಾರೆ.
ಸಾಧುಗಳಿಗೆ ಸೇರಿದ ವಸ್ತುಗಳನ್ನು ಸೇರಿದ್ದ ಗಲಭೆಕೋರರು ಎಲ್ಲೆಡೆ ಎಸೆದರು, ಇದನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಲಾಗಿತ್ತು, ಇದರಿಂದ ಮತ್ತಷ್ಟು ಮಂದಿ ಕೆರಳುವ ಸಾಧ್ಯತೆಯಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ನಿನ್ನೆ ಜಿಲ್ಲಾಡಳಿತ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ತುರ್ತು ಸಭೆ ನಡೆಸಿದರು, ಸುಳ್ಳು ಸುದ್ದಿಗಳನ್ನು ನಂಬಿ ಕಾನೂನು ಕೈಗೆತ್ತಿಕೊಳ್ಳದಂತೆ ಸ್ಥಳೀಯರಲ್ಲಿ ಪೊಲೀಸರು ಮನವಿ ಮಾಡಿದ್ದಾರೆ. ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದರೇ ಕೂಡಲೇ ಪೊಲೀಸರಿಗೆ ತಿಳಿಸುವಂತೆ ಸೂಚಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com