ಕಾಶ್ಮೀರ ಪ್ರತ್ಯೇಕತಾವಾದಿ ಆಸಿಯಾ ಅಂದ್ರಾಬಿ ಸೇರಿ ಮೂವರಿಗೆ 10 ದಿನಗಳ ಎನ್ಐಎ ಕಸ್ಟಡಿ

ಆಸಿಯಾ ಅಂದ್ರಾಬಿ ಮತ್ತು ಇನ್ನೂ ಇಬ್ಬರು ಕಾಶ್ಮೀರ ಪ್ರತ್ಯೇಕತಾವಾದಿಗಳನ್ನು ವಿಚಾರಣೆಗಾಗಿ 10 ದಿನಗಳ ಕಾಲರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಶಕ್ಕೆ ನೀಡಿ ದೆಹಲಿ ನ್ಯಾಯಾಲಯ ಆದೇಶಿಸಿದೆ.
ಕಾಶ್ಮೀರ ಪ್ರತ್ಯೇಕತಾವಾದಿ  ಆಸಿಯಾ ಅಂದ್ರಾಬಿ ಸೇರಿ ಮೂವರಿಗೆ 10 ದಿನಗಳ ಎನ್ಐಎ ಕಸ್ಟಡಿ
ಕಾಶ್ಮೀರ ಪ್ರತ್ಯೇಕತಾವಾದಿ ಆಸಿಯಾ ಅಂದ್ರಾಬಿ ಸೇರಿ ಮೂವರಿಗೆ 10 ದಿನಗಳ ಎನ್ಐಎ ಕಸ್ಟಡಿ
ನವದೆಹಲಿ: ಆಸಿಯಾ ಅಂದ್ರಾಬಿ ಮತ್ತು ಇನ್ನೂ ಇಬ್ಬರು ಕಾಶ್ಮೀರ ಪ್ರತ್ಯೇಕತಾವಾದಿಗಳನ್ನು  ವಿಚಾರಣೆಗಾಗಿ 10 ದಿನಗಳ ಕಾಲ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಶಕ್ಕೆ ನೀಡಿ ದೆಹಲಿ ನ್ಯಾಯಾಲಯ ಆದೇಶಿಸಿದೆ.
ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಪೂನಮ್ ಬಾಂಬಾ ಅವರ ಮುಂದೆ ಈ ಮೂವರೂ ಹಾಜರಾಗಿದ್ದು ನಿಷೇಧಿತ ದುಖ್ತರಣ್-ಇ-ಮಿಲಾಟ್,ಮುಖ್ಯಸ್ಥೆ ಅಂದ್ರಾಬಿ ಸೇರಿ ಮೂವರು ಕಾಶ್ಮೀರದಲ್ಲಿ ಪ್ರಚೋದನಾಕಾರಿ ಭಾಷಣ ನಡೆಸಿದ್ದರೆಂದು ಆರೋಪಿಸಲಾಗಿತ್ತು.
ಅಂದ್ರಾಬಿ  ಹಾಗೂ ಆಕೆಯ ಇಬ್ಬರು ಸಹಚರರಾದ ಸೋಫಿ ಫೆಮೀದಾ ಹಾಗು ನಹಿದಾ ನಸ್ರೀನ್ ಅವರುಗಳನ್ನು 15 ದಿನಗಳ ಕಾಲ ತಮ್ಮ ವಶಕ್ಕೆ ನೀಡಬೇಕೆಂದು ಎನ್ಐಎ  ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು.
ಶುಕ್ರವಾರ ಅವರನ್ನು ಬಿಗಿ ಭದ್ರತೆಯಲ್ಲಿ ಶ್ರೀನಗರದಿಂದ ದೆಹಲಿಗೆ ಕರೆತರಲಾಗಿದ್ದು ಇವರುಗಳ ವಿಚಾರಣೆಯನ್ನು ಕ್ಯಾಮರಾದಲ್ಲಿ ಚಿತ್ರೀಕರಿಸಲಾಗಿದೆ.
ಈ ವರ್ಷ ಏಪ್ರಿಲ್ ನಲ್ಲಿ ಮೂರು ಮಹಿಳೆಯರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಕಾಶ್ಮೀರ ಹೈಕೋರ್ಟ್ ಕಳೆದ ತಿಂಗಳು ಜಾಮೀನು ರದ್ದುಗೊಳಿಸಿದ ಬಳಿಕ ಶ್ರೀನಗರ ಜೈಲಿನಲ್ಲಿದ್ದ ಅಂದ್ರಾಬಿ ಮತ್ತು ಅವರ ಸಹಚರರನ್ನು ಇಂದು ವಿಚಾರಣೆಗಾಗಿ ದೆಹಲುಇಯ ವಿಶೇಷ ನ್ಯಾಯಾಲಯಕ್ಕೆ ಕರೆತರಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com