ಯಾತ್ರಿಗಳ ಸ್ಥಳಾಂತರ
ದೇಶ
ಮಾನಸ ಸರೋವರ ಯಾತ್ರೆ: ನೇಪಾಳದಿಂದ ಎಲ್ಲಾ ಭಾರತೀಯರ ಸ್ಥಳಾಂತರ
ಕೈಲಾಸ ಮಾನಸ ಸರೋವರ ಯಾತ್ರೆಯಿಂದ ಮರಳುತ್ತಿದ್ದ ವೇಳೆ ಸಂಕಷ್ಟಕ್ಕೆ ಸಿಲುಕಿದ್ದ 1,430 ಭಾರತೀಯ ಯಾತ್ರಾರ್ಥಿಗಳನ್ನು...
ನವದೆಹಲಿ: ಕೈಲಾಸ ಮಾನಸ ಸರೋವರ ಯಾತ್ರೆಯಿಂದ ಮರಳುತ್ತಿದ್ದ ವೇಳೆ ಸಂಕಷ್ಟಕ್ಕೆ ಸಿಲುಕಿದ್ದ 1,430 ಭಾರತೀಯ ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ನೇಪಾಳದಿಂದ ಭಾರತಕ್ಕೆ ಸ್ಥಳಾಂತರಿಸಲಾಗಿದೆ ಎಂದು ಭಾರತೀಯ ರಾಯಭಾರ ಕಚೇರಿ ಶನಿವಾರ ತಿಳಿಸಿದೆ.
ಇಂದು ಸಿಮಿಕೋಟ್ ಮತ್ತು ಹಿಲ್ಸಾದಿಂದ 160 ಜನರ ಕೊನೆ ಬ್ಯಾಚ್ ನ ತಂಡವನ್ನು ಸ್ಥಳಾಂತರಿಸುವುದರೊಂದಿಗೆ ರಕ್ಷಣಾ ಕಾರ್ಯ ಮುಕ್ತಾಯವಾಗಿದೆ ಎಂದು ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.
ಭಾರಿ ಮಳೆಯಿಂದಾಗಿ ಕಳೆದ ಐದು ಆರು ದಿನಗಳಿಂದ 290 ಕನ್ನಡಿಗರು ಸೇರಿದಂತೆ ನೇಪಾಳದ ಹಿಲ್ಸಾ, ಸಿಮಿಕೋಟ್ ಮತ್ತು ಟಿಬೆಟ್ ಭಾಗದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಒಟ್ಟು 1,430 ಭಾರತೀಯ ಯಾತ್ರಿಗಳನ್ನು ರಕ್ಷಿಸಲಾಗಿದೆ.
ಈ ಯಾತ್ರಾರ್ಥಿಗಳ ಸಂಪರ್ಕ ಸಂಬಂಧ ಫೋನ್ ನಂಬರ್: +977-98236 72371ಗೆ ಕರೆ ಮಾಡಬಹುದು ಎಂದು ತಿಳಿಸಲಾಗಿದೆ. ಇನ್ನು, ಯಾತ್ರಾರ್ಥಿಗಳ ಕುಟುಂಬಸ್ಥರು ಇನ್ನೂ ಕೂಡ ಆತಂಕದಲ್ಲಿದ್ದು, ಕುಟುಂಬಸ್ಥರನ್ನು ಸಂಪರ್ಕಿಸಲು ಪರದಾಡುತ್ತಿದ್ದಾರೆ.


