ಸುನಂದ್ ಪುಷ್ಕರ್, ಶಶಿ ತರೂರ್ ಮತ್ತು ಸುಬ್ರಮಣಿಯನ್ ಸ್ವಾಮಿ
ಸುನಂದ್ ಪುಷ್ಕರ್, ಶಶಿ ತರೂರ್ ಮತ್ತು ಸುಬ್ರಮಣಿಯನ್ ಸ್ವಾಮಿ

ಸುನಂದಾ ಪ್ರಕರಣದಲ್ಲಿ ಸುಬ್ರಮಣ್ಯನ್ ಸ್ವಾಮಿಗೆ ಏಕೆ ಇಷ್ಟು ಆಸಕ್ತಿ: ತರೂರ್ ಪರ ವಕೀಲರ ಪ್ರಶ್ನೆ

: ಕಾಂಗ್ರೆಸ್ ಸಂಸದ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್‌ ನಿಗೂಢ ಸಾವಿನ ಪ್ರಕರಣದ ವಿಚಾರಣೆಯಲ್ಲಿ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರಿಗೆ ಏಕೆ ...
ನವದೆಹಲಿ:  ಕಾಂಗ್ರೆಸ್ ಸಂಸದ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್‌ ನಿಗೂಢ ಸಾವಿನ ಪ್ರಕರಣದ ವಿಚಾರಣೆಯಲ್ಲಿ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರಿಗೆ ಏಕೆ ಇಷ್ಟೊಂದು ಆಸಕ್ತಿ ಎಂದು ತರೂರ್ ಪರ ವಕೀಲರು ಪ್ರಶ್ನಿಸಿದ್ದಾರೆ. 
ಪ್ರಕರಣ ಸಂಬಂದ ತರೂರ್ ಅವರಿಗೆ ಜಾಮೀನು ಸಿಕ್ಕಿದೆ. ಪ್ರಾಸಿಕ್ಯೂಶನ್‌ಗೆ ನೆರವಾಗಲು ಅವಕಾಶ ಕೋರಿ ಸುಬ್ರಮಣಿಯನ್‌  ಸ್ವಾಮಿ ಸಲ್ಲಿಸಿರುವ ಅರ್ಜಿಯನ್ನು ವಿರೋಧಿಸಿರುವ ಶಶಿ ತರೂರ್‌ ಅವರ ವಕೀಲ, ಈ ಪ್ರಕರಣದಲ್ಲಿ ಆಸಕ್ತಿ ತೋರುವ ಕಾನೂನು ಅರ್ಹತೆ ಸ್ವಾಮಿ ಅವರಿಗೆ ಏನಿದೆ? ಎಂದು ಪ್ರಶ್ನಿಸಿದ್ದಾರೆ. 
ಇಂದು ದೆಹಲಿ ಪೊಲೀಸ್‌ ಮತ್ತು ಆರೋಪಿ ತರೂರ್‌ ಅವರು ಈ ಪ್ರಕರಣದಲ್ಲಿನ ನನ್ನ ಪಾತ್ರ ಕಾನೂನು ಸಮ್ಮತವಾದುದಲ್ಲ ಎಂದು ವಾದಿಸಿದ್ದಾರೆ. ಸಿಆರ್‌ಪಿಸಿ ಸೆ.302ರ ಪ್ರಕಾರ ನನಗಿರುವ ಕಾನೂನು ಅರ್ಹತೆಯ ಆಧಾರದಲ್ಲಿ ನಾನು ವಾದಿಸಿದ್ದೇನೆ. ಇಲ್ಲಿ ನನ್ನ ಪಾತ್ರದ ಸಿಂಧುತ್ವ ಅಪ್ರಸ್ತುತ. ಈ ಪ್ರಕರಣದ ವಿಚಾರಣೆ ನ್ಯಾಯೋಚಿತವಾಗಿ ನಡೆಯಬೇಕು ಎಂದು ಸ್ಪಷ್ಟ ಪಡಿಸಿದ್ದಾರೆ. 
ಇದಕ್ಕೆ ಮೊದಲು ಪಟಿಯಾಲಾ ಹೌಸ್‌ ಕೋರ್ಟ್‌ ನಲ್ಲಿ ಇಂದು ಶನಿವಾರ ಹಾಜರಾದ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಅವರು ಜಾಮೀನು ಕೋರಿಕೆ ಅರ್ಜಿ ಸಲ್ಲಿಸಿದರು. 
ಆಗ ನ್ಯಾಯಾಧೀಶರು, ತರೂರ್‌ಗೆ ಈಗಾಗಲೇ ಕೋರ್ಟ್‌ ನಿರೀಕ್ಷಣಾ ಜಾಮೀನು ನೀಡಿರುವುದರಿಂದ ಮತ್ತೆ ಔಪಚಾರಿಕ ಜಾಮೀನಿಗಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಹೇಳಿದರು. 
2014ರ ಜನವರಿ 17 ರಂದು ದೆಹಲಿಯ ಪಂಚತಾರಾ ಹೊಟೆಲ್ ಒಂದರಲ್ಲಿ ತರೂರ್ ಪತ್ನಿ ಸುನಂದಾ ಪುಷ್ಕರ್ ನಿಗೂಡವಾಗಿ ಸಾವನ್ನಪ್ಪಿದ್ದರು.

Related Stories

No stories found.

Advertisement

X
Kannada Prabha
www.kannadaprabha.com