ಗಡ್ಡ ಬಿಟ್ಟಿರುವ ಮುಸ್ಲಿಮರು ಉಗ್ರರು, ಫತ್ವಾ ಹೊರಡಿಸುವವರ ದೇಶದ್ರೋಹ ಪ್ರಕರಣ ದಾಖಲಿಸಿ: ಶಿಯಾ ಮುಸ್ಲಿಂ ಮುಖಂಡ

ಉತ್ತರ ಪ್ರದೇಶದ ಶಿಯಾ ಕೇಂದ್ರ ವಕ್ಫ್ ಮಂಡಳಿ ಅಧ್ಯಕ್ಷ ವಸೀಮ್ ರಿಜ್ವಿ ಹೊಸ ಚರ್ಚೆಗೆ ನಾಂದಿ ಹಾಡಿದ್ದು, ಮೀಸೆ ತೆಗೆದು ಗಡ್ಡ ಬಿಟ್ಟಿರುವ ಮುಸ್ಲಿಮರು ಉಗ್ರರು, ನೋಡಲು ಭಯಂಕರವಾಗಿರುತ್ತಾರೆ ಎಂದು ಹೇಳಿದ್ದಾರೆ.
ಗಡ್ಡ ಬಿಟ್ಟಿರುವ ಮುಸ್ಲಿಮರು ಉಗ್ರರು, ಫತ್ವಾ ಹೊರಡಿಸುವವರ ದೇಶದ್ರೋಹ ಪ್ರಕರಣ ದಾಖಲಿಸಿ: ಶಿಯಾ ಮುಸ್ಲಿಂ ಮುಖಂಡ
ಗಡ್ಡ ಬಿಟ್ಟಿರುವ ಮುಸ್ಲಿಮರು ಉಗ್ರರು, ಫತ್ವಾ ಹೊರಡಿಸುವವರ ದೇಶದ್ರೋಹ ಪ್ರಕರಣ ದಾಖಲಿಸಿ: ಶಿಯಾ ಮುಸ್ಲಿಂ ಮುಖಂಡ
ನವದೆಹಲಿ: ಉತ್ತರ ಪ್ರದೇಶದ ಶಿಯಾ ಕೇಂದ್ರ ವಕ್ಫ್ ಮಂಡಳಿ ಅಧ್ಯಕ್ಷ ವಸೀಮ್ ರಿಜ್ವಿ ಹೊಸ ಚರ್ಚೆಗೆ ನಾಂದಿ ಹಾಡಿದ್ದು, ಮೀಸೆ ತೆಗೆದು ಗಡ್ಡ ಬಿಟ್ಟಿರುವ ಮುಸ್ಲಿಮರು ಉಗ್ರರು, ನೋಡಲು ಭಯಂಕರವಾಗಿರುತ್ತಾರೆ ಎಂದು ಹೇಳಿದ್ದಾರೆ. 
ಇಸ್ಲಾಂ ನಲ್ಲಿ ಗಡ್ಡ ಬಿಡುವುದು ಸಂಪ್ರದಾಯ. ಆದರೆ ಮೀಸೆ ತೆಗೆದು ಗಡ್ಡ ಬೆಳೆಸುವವರು ಭಯೋತ್ಪಾದಕರಾಗಿದ್ದು ವಿಶ್ವ ಹಾಗೂ ದೇಶಾದ್ಯಂತ ಭಯೋತ್ಪಾದನೆಯ ಮುಖವಾಗಿದ್ದಾರೆ ಎಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಸೀಮ್ ರಿಜ್ವಿ  ಹೇಳಿಕೆ ವೈರಲ್ ಆಗತೊಡಗಿದೆ.  ಮೀಸೆ ಇಲ್ಲದೇ ಗಡ್ಡ ಬಿಡುವುದೇ ಜನರಲ್ಲಿ ಭಯ ಹುಟ್ಟಿಸುವುದಕ್ಕಾಗಿ ಇಂತಹ ಮುಸ್ಲಿಮರು ಶರಿಯತ್ ಹೆಸರಿನಲ್ಲಿ ಜನರ ಖಾಸಗಿ ಜೀವನದಲ್ಲಿ ಮಧ್ಯಪ್ರವೆಶ ಮಾಡಿ, ಫತ್ವಾ ಹೊರಡಿಸುತ್ತಾರೆ. ಆದರೆ  ಈ ರೀತಿಯ ಕ್ರಮಗಳಿಗೂ ಇಸ್ಲಾಮ್ ಗೂ ಸಂಬಂಧವೇ ಇಲ್ಲ ಎಂದು ವಸೀಮ್ ರಿಜ್ವಿ ಹೇಳಿದ್ದಾರೆ. 
ಶ್ರೀಗಂಧದ ತಿಲಕ ಧರಿಸಿದ ಕಾರಣಕ್ಕಾಗಿ ಯುವತಿಯನ್ನು ಅಮಾನತುಗೊಳಿಸಿದ ಕೇರಳ ಮದರಸಾ ಕ್ರಮದ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಸೀಮ್ ರಿಜ್ವಿ, ಭಾರತೀಯ ನಾರಿಯರು ಬಿಂದಿ ಅಥವಾ ಸಿಂಧೂರವನ್ನು ವಿವಾಹದ ಸಂಪ್ರದಾಯದ ಭಾಗವಾಗಿ ಧರಿಸುತ್ತಾರೆ. ಆದರೆ ಇಂತಹ ಪವಿತ್ರವಾದ ಸಂಪ್ರದಾಯ ಹರಾಮ್ ಆಗಲು ಎಂದಿಗೂ ಸಾಧ್ಯವಿಲ್ಲ ಎಂದು ವಸೀಮ್ ರಿಜ್ವಿ ಅಭಿಪ್ರಾಯಪಟ್ಟಿದ್ದಾರೆ. 
ಇದೇ ವೇಳೆ ಫತ್ವಾ ಹೊರಡಿಸುವವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು ಹಾಗೂ ಎರಡು ಗುಂಪುಗಳ ನಡುವೆ ದ್ವೇಷ ಉಂಟುಮಾಡುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು, ಸಂವಿಧಾನದ ಹೊರತಾಗಿ ಶಿಕ್ಷೆ ನೀಡುವ ಅಧಿಕಾರ ಯಾರಿಗೂ ಇಲ್ಲ, ಫತ್ವಾ ಹೊರಡಿಸುವ ಮುಸ್ಲಿಂ ಮುಲ್ಲಾಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕೆಂದು ವಸೀಮ್ ಆಗ್ರಹಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com