ದೇಶ
ಸುಪ್ರೀಂ ತೀರ್ಪು ನ್ಯಾಯಾಂಗದ ಮೇಲಿನ ವಿಶ್ವಾಸವನ್ನು ಹೆಚ್ಚಿಸಿದೆ: ನಿರ್ಭಯಾ ತಾಯಿ ಆಶಾದೇವಿ
ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳಿಗೆ ಗಲ್ಲು ಶಿಕ್ಷೆ ಖಾಯಂ ಮಾಡಿ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದ್ದು ಈ ತೀರ್ಪು ನ್ಯಾಯಾಂಗದ ಮೇಲಿನ ನಮ್ಮ ನಂಬಿಕೆಯನ್ನು ದೃಢಪಡಿಸಿದೆ....
ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳಿಗೆ ಗಲ್ಲು ಶಿಕ್ಷೆ ಖಾಯಂ ಮಾಡಿ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದ್ದು ಈ ತೀರ್ಪು ನ್ಯಾಯಾಂಗದ ಮೇಲಿನ ನಮ್ಮ ನಂಬಿಕೆಯನ್ನು ದೃಢಪಡಿಸಿದೆ ಎಂದು ನಿರ್ಭಯಾ ತಾಯಿ ಹೇ:ಳಿದ್ದಾರೆ
ಸುಪ್ರೀಂ ಕೋರ್ಟ್ ಗೆ ಧನ್ಯವಾದಗಳು.ನಿರ್ಭಯಾ ಅವರ ತಾಯಿ ಆಶಾ ದೇವಿ ಹೇಳಿದ್ದು "ನಮ್ಮ ಹೋರಾಟವು ಇಲ್ಲಿಗೆ ಕೊನೆಗೊಳ್ಳುವುದಿಲ್ಲ.ಈ ತೀರ್ಪು ವಿಳಂಬವಾದದ್ದರಿಂದ ದೇಶದ ಇತರೆ ಹೆಣ್ಣುಮಕ್ಕಳ ಮೇಲೆ ಇದು ಪರಿಣಾಮಬೀರಿದೆ.ನಾನು ನಿರ್ಭಯಾಳಂತೆಯೇ ಇತರೆ ಮಹಿಳೆಯರಿಗೆ ಸಹ ಬೇಗ ನ್ಯಾಯ ದೊರಕಬೇಕೆಂದು ಒತ್ತಾಯಿಸುತ್ತೇನೆ. ಈ ಸಂಬಂಧ ನ್ಯಾಯಾಂಗ ವ್ಯವಸ್ಥೆ ಬಿಗಿಯಾಗಬೇಕೆಂದು ನಾನು ಬಯ್ಸುತ್ತೇನೆ" ಅವರು ಹೇಳಿದರು.
"ಅವರು ಬಾಲಾಪರಾಧಿಗಳಾಗಿರಲಿಲ್ಲ ಆದರೆ ಇಂತಹಾ ಕೃತ್ಯ ಎಸಗಿರುವುದು ದುರದೃಷ್ಟಕರ"
ಇದೇ ವೇಳೆ ಮಾತನಾಡಿದ ಗ್ಯಾಂಗ್ ರೇಪ್ ಆರೋಪಿಯೊಬ್ಬನ ತಂದೆ ಬದ್ರಿನಾಥ್ ಸಿಂಗ್ ಮರುಪರಿಶೀಲನೆ ಅರ್ಜಿ ವಜಾ ಆಗಿದೆ ಎನ್ನುವುದು ನಮಗೆ ತಿಳಿದಿದೆ, ಮುಂದೇನು? ಇದಾಗಲೇ ಬಹಳ ಸಮಯ ಸಂದಿದೆ, ಮಹಿಳೆಯರಿಗೆ ಬೆದರಿಕೆಗಳು ಇನ್ನಷ್ಟು ಹೆಚ್ಚಿದೆ, ಅವರು ಆದಷ್ಟು ಬೇಗ ನೇಣುಗಂಬವೇರಲಿದ್ದಾರೆ ಎಂದು ನಾನು ಭಾವಿಸುತ್ತೇನೆ. ಇದೇ ಸರಿಯಾದದ್ದು" ಎಂದರು.
2012 ರಲ್ಲಿ ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್ ನಲ್ಲಿ 23 ವರ್ಷ ವಯಸ್ಸಿನ ಯುವತಿ ಮೇಲೆ ಐವರು ಪುರುಷರ ಗುಂಪು ಅತ್ಯಾಚಾರ ನಡೆಸಿತ್ತು. ಘಟನೆ ನಡೆದ 13 ದಿನಗಳ ಬಳಿಕ ಸಂತ್ರಸ್ತೆ ಆಸ್ಪತ್ರೆಯಲ್ಲಿ ಮೃತಳಾಗಿದ್ದಳು.