ಸಲಿಂಗಕಾಮ ಅಪರಾಧ ತೀರ್ಪು ಮರುಪರಿಶೀಲನೆ ಮುಂದೂಡಲು ಅಸಾಧ್ಯ: ಸುಪ್ರೀಂ ಕೋರ್ಟ್

ಮಂಗಳವಾರ ನಡೆಯಬೇಕಾಗಿರುವ ಸಲಿಂಗಕಾಮ ಅಪರಾಧ ಎನ್ನುವ ಕುರಿತ ತೀರ್ಪಿನ ಮರುಪರಿಶೀಲನೆಯನ್ನು ಮುಂದೂಡಲು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ.
ಸಲಿಂಗಕಾಮ ಅಪರಾಧ ತೀರ್ಪು ಮರುಪರಿಶೀಲನೆ ಮುಂದೂಡಲು ಅಸಾಧ್ಯ: ಸುಪ್ರೀಂ ಕೋರ್ಟ್
ಸಲಿಂಗಕಾಮ ಅಪರಾಧ ತೀರ್ಪು ಮರುಪರಿಶೀಲನೆ ಮುಂದೂಡಲು ಅಸಾಧ್ಯ: ಸುಪ್ರೀಂ ಕೋರ್ಟ್
ನವದೆಹಲಿ: ಮಂಗಳವಾರ ನಡೆಯಬೇಕಾಗಿರುವ ಸಲಿಂಗಕಾಮ ಅಪರಾಧ ಎನ್ನುವ ಕುರಿತ ತೀರ್ಪಿನ ಮರುಪರಿಶೀಲನೆಯನ್ನು ಮುಂದೂಡಲು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ.
ಸಲಿಂಗಕಾಮ ಅಪರಾಧ ಎನ್ನುವ ಕುರಿತಂತೆ ಪಿಐಎಲ್ ಗೆ ಪ್ರತಿಕ್ರಯಿಸಲು ಕೇಂದ್ರವು ಹೆಚುವರಿ ಸಮಯ ಕೋರಿದ ಬಳಿಕ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ  ನೇತೃತ್ವದ ಪೀಠವು ವಿಚಾರಣೆಯನ್ನು ಮುಂದೂಡಲು ನಿರಾಕರಿಸಿದೆ.
ಇದನ್ನು ಮುಂದೂಡಲು ಬರುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ. ಸಲಿಂಗಿಗಳ ನಡುವಿನ ಲೈಂಗಿಕತೆಯ ಸಂಬಂಧದ ಸಮಸ್ಯೆಯನ್ನು ಒಳಗೊಂಡಂತೆಲ್ಕು ಪ್ರಮುಖ ವಿಷಯಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನ ಐದು ನ್ಯಾಯಾಧೀಶರ ಸಂವಿಧಾನ ಪೀಠ ನಾಳೆಯಿಂದ ಪ್ರಾರಂಭಿಸಲಿದೆ.
2013 ರಲ್ಲಿ ಸುಪ್ರೀಂ ಕೋರ್ಟ್ ಸಲಿಂಗಿಗಳ ನಡುವಿನ ಲೈಂಗಿಕತೆ ಅಪರಾಧ ಎಂದು ತೀರ್ಪು ನೀಡಿತ್ತು.
ಇದೀಗ ನೂತನವಾಗಿ ರಚಿಸಲಾದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ಈ ತೀರ್ಪಿನ ಮರು ಪರಿಶೀಲನೆಯನ್ನು ನಾಳೆ ಪ್ರಾರಂಭ ಮಾಡಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com