ಟ್ರಾಯ್ ನ ಸಾರ್ವಜನಿಕ ವೈಫೈ ಪ್ರಸ್ತಾವನೆಗೆ ಟೆಲಿಕಾಂ ಕಂಪನಿಗಳ ತೀವ್ರ ವಿರೋಧ!

ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ನ ಸಾರ್ವಜನಿಕ ವೈ-ಫೈ ಮಾದರಿಯ ಪ್ರಸ್ತಾವನೆಯನ್ನು ಟೆಲಿಕಾಂ ಸಂಸ್ಥೆಗಳು ತೀವ್ರವಾಗಿ ವಿರೋಧಿಸಿದ್ದು, ಟ್ರಾಯ್ ನ ಪ್ರಸ್ತಾವನೆ ಜಾರಿಯಾದರೆ ರಾಷ್ಟ್ರೀಯ ಭದ್ರತೆಗೆ
ಚೆನ್ನೈ ನ ಮರೀನಾ ಬೀಚ್ ನಲ್ಲಿ ಕಲ್ಪಿಸಲಾಗಿರುವ ಸಾರ್ವಜನಿಕ ವೈ-ಫೈ ಸೌಲಭ್ಯ
ಚೆನ್ನೈ ನ ಮರೀನಾ ಬೀಚ್ ನಲ್ಲಿ ಕಲ್ಪಿಸಲಾಗಿರುವ ಸಾರ್ವಜನಿಕ ವೈ-ಫೈ ಸೌಲಭ್ಯ
ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ನ ಸಾರ್ವಜನಿಕ ವೈ-ಫೈ ಮಾದರಿಯ ಪ್ರಸ್ತಾವನೆಯನ್ನು ಟೆಲಿಕಾಂ ಸಂಸ್ಥೆಗಳು ತೀವ್ರವಾಗಿ ವಿರೋಧಿಸಿದ್ದು, ಟ್ರಾಯ್ ನ ಪ್ರಸ್ತಾವನೆ ಜಾರಿಯಾದರೆ ರಾಷ್ಟ್ರೀಯ ಭದ್ರತೆಗೆ ಮಾರಕ ಎಂದು ಹೇಳಿವೆ.
ಸೈಬರ್ ಕೆಫೆಗಳಿಗೆ ಈಗಿರುವ ನಿಯಮಗಳನ್ನು ಆಧರಿಸಿ ಟ್ರಾಯ್ ಸಾರ್ವಜನಿಕ ವೈ-ಫೈ ಮಾದರಿಗೆ ಪ್ರಸ್ತಾವನೆ ನೀಡಿದ್ದು, ಸಾರ್ವಜನಿಕ ವೈಫೈ ಸೌಲಭ್ಯವನ್ನು ಕಲ್ಪಿಸುವ ಸಂಸ್ಥೆಗಳನ್ನು ಸಾರ್ವಜನಿಕ ಡೇಟಾ ಸಂಗ್ರಾಹಕ (ಪಿಡಿಒಎ) ಗಳೆಂದು ಗುರುತಿಸಲು ಸೂಚನೆ ನೀಡಿದೆ.  ಈ ಹಿಂದಿನ ಪಬ್ಲಿಕ್ ಕಾಲ್ ಆಫೀಸ್ ಗಳಂತೆ ಸಾರ್ವಜನಿಕ ವೈಫೈ ನ್ನು ನೀಡುವ ಸಂಸ್ಥೆಗಳನ್ನು ಪಬ್ಲಿಕ್ ಡಾಟಾ ಆಫೀಸ್ ಎಂದು ಗುರುತಿಸಲು ಪ್ರಸ್ತಾವನೆ ನೀಡಿದೆ. 
ನೋಂದಣಿ ಮಾಡಿದ ಸಂಸ್ಥೆಗಳು ಸಾರ್ವಜನಿಕರಿಗೆ ಸೈಬರ್ ಕೆಫೆಗಳ ಮೂಲಕ ಇಂಟರ್ ನೆಟ್ ಸೌಲಭ್ಯ ಕಲ್ಪಿಸುತ್ತಿದೆಯೋ ಅಂತಯೇ ಸಾರ್ವಜನಿಕ ವೈಫೈ ನೀಡುವ ಪಿಡಿಒಎ ಗಳೂ ನೋಂದಣಿ ಮಾಡಿಕೊಂಡು ಇಂಟರ್ ನೆಟ್ ಸೌಲಭ್ಯಗಳನ್ನು ನೀಡಬಹುದಾಗಿದೆ. ಆದರೆ ಇದಕ್ಕೆ ಏರ್ ಟೆಲ್, ರಿಲಾಯನ್ಸ್, ಜಿಯೋ, ವೋಡೋಫೋನ್ ಸೇರಿದಂತೆ ಹಲವು ಟೆಲಿಕಾಂ ಸಂಸ್ಥೆಗಳು ವಿರೋಧ ವ್ಯಕ್ತಪಡಿಸುತ್ತಿದ್ದು, ಟ್ರಾಯ್ ನ ಪ್ರಸ್ತಾವನೆ ರಾಷ್ಟ್ರೀಯ ಭದ್ರತೆಗೆ ಮಾರಕ ಎಂದು ಹೇಳುತ್ತಿವೆ.
ಟ್ರಾಯ್ ನ ಈ ಯೋಜನೆ ಜಾರಿಗೆ ಬಂದರೆ ಟೆಲಿಕಾಂ ಸಂಸ್ಥೆಗಳು ಸಾರ್ವಜನಿಕ ವೈಫೈ ನೀಡುವ ಸಂಸ್ಥೆಗಳ ನ್ಡುವೆ ಪೈಪೋಟಿಯ ಮಟ್ಟ ಹೆಚ್ಚಲಿದ್ದು, ಪರವಾನಗಿ ಹೊಂದಿರುವ ಹಾಗೂ ಹೊಂದದೇ ಇರುವವರ ನಡುವೆ  ಪೈಪೋಟಿ ನೀಡಲು ಸಮಾನವಾದ ಅವಕಾಶ ಇರುವುದಿಲ್ಲ ಎಂದು ಹೇಳುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com