ಭಾಷಾಂತರ ದೋಷ: ತಮಿಳಿನಲ್ಲಿ ನೀಟ್ ಪರೀಕ್ಷೆ ಬರೆದವರಿಗೆ ಕೃಪಾಂಕ ನೀಡಿ ಎಂದ ಮದ್ರಾಸ್ ಹೈಕೋರ್ಟ್

ಈ ವರ್ಷ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನಿಟ್) ಬರೆದಿರುವ ತಮಿಳು ಮಾಧ್ಯಮ ವಿದ್ಯಾರ್ಥಿಗಳಿಗೆ ಕೃಪಾಂಕ ನಿಡಬೇಕೆಂದು ಕೇಂದ್ರ ವೃತ್ತಿಶಿಕ್ಷಣ .....
ಭಾಷಾಂತರ ದೋಷ: ತಮಿಳಿನಲ್ಲಿ ನೀಟ್ ಪರೀಕ್ಷೆ ಬರೆದವರಿಗೆ ಕೃಪಾಂಕ ನೀಡಿ ಎಂದ ಮದ್ರಾಸ್ ಹೈಕೋರ್ಟ್
ಭಾಷಾಂತರ ದೋಷ: ತಮಿಳಿನಲ್ಲಿ ನೀಟ್ ಪರೀಕ್ಷೆ ಬರೆದವರಿಗೆ ಕೃಪಾಂಕ ನೀಡಿ ಎಂದ ಮದ್ರಾಸ್ ಹೈಕೋರ್ಟ್
ಮಧುರೈ: ಈ ವರ್ಷ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನಿಟ್) ಬರೆದಿರುವ ತಮಿಳು ಮಾಧ್ಯಮ ವಿದ್ಯಾರ್ಥಿಗಳಿಗೆ ಕೃಪಾಂಕ ನಿಡಬೇಕೆಂದು ಕೇಂದ್ರ ವೃತ್ತಿಶಿಕ್ಷಣ ಪರೀಕ್ಷಾ ಮಂಡಲಿ (ಸಿಬಿಎಸ್ಇ) ಗೆ ಮದ್ರಾಸ್ ಹೈಕೋರ್ಟ್ ಮಧುರೈ ಪೀಠ ಆದೇಶಿಸಿದೆ.
ಇನ್ನೆರಡು ವಾರಗಳಲ್ಲಿ ತಮಿಳು ಮಾದ್ಯಮದಲ್ಲಿ ನೀಟ್ ಬರೆದ ಅಭ್ಯರ್ಥಿಗಳಿಗೆ 196  ಅಂಕ ನೀಡುವುದರೊಡನೆ ಅರ್ಹ ಅಭ್ಯರ್ಥಿಗಳ ನೂತನ ಪಟ್ಟಿಯನ್ನು ಬಿಡುಗಡೆಗೊಳಿಸಲು ಕೋರ್ಟ್ ಸಿಬಿಎಸ್ಇಗೆ ನಿರ್ದೇಶನ ನೀಡಿದೆ. 
ವೈದ್ಯಕೀಯ ಕೋರ್ಸ್ ಗಳಿಗೆ ಸಂಬಂಧಿಸಿ ನೀಡಲಾದ ಪ್ರಶ್ನೆ ಪತ್ರಿಕೆಯಲ್ಲಿ  49 ಪ್ರಶ್ನೆಗಳನ್ನು ತಪ್ಪಾಗಿ ಭಾಷಾಂತರಿಸಲಾಗಿದೆ.ಈ ಹಿನ್ನೆಲೆಯಲ್ಲಿ ಪರೀಕ್ಷಾರ್ಥಿಗಳಿಗೆ ಕೃಪಾಂಕಗಳನ್ನು ನೀಡಿರೆಂದು ನ್ಯಾಯಾಧೀಶ ಸಿ.ಟಿ ಸೆಲ್ವಂ ಮತ್ತು ಎ.ಎಂ. ಬಶೀರ್ ಅಹೇದ್ ಅವರನ್ನೊಳಗೊಂಡ ಪೀಠ  ಹೇಳಿದೆ.
ನೀಟ್ ಪರೀಕ್ಷೆಗಳಲ್ಲಿ ನಿಡಲಾದ ತಮಿಳು ಭಾಷಾ ಪ್ರಶ್ನೆಪತ್ರಿಕೆಗಳಲ್ಲಿ ಭಾಷಾಂತರ ದೋಷಗಳಿದೆ, ಹೀಗಾಗಿ ವಿದ್ಯಾರ್ಥಿಗಳಿಗೆ ಪ್ರಶ್ನೆಗಳು ಸರಿಯಾಗಿ ಅರ್ಥೈಸಿಕೊಳ್ಳಲು ಆಗಿಲ್ಲ. ಅವರಿಗೆ ಕೃಪಾಂಕಗಳನ್ನು ನಿಡಬೇಕೆಂದು ಮದ್ರಾಸ್ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com