ಬಹು ಅಂಗಾಂಗ ವೈಫಲ್ಯ : ಎನ್ ಡಿ ತಿವಾರಿ ಆರೋಗ್ಯ ಕ್ಷೀಣ - ಉತ್ತರ ಖಂಡ್ ಮುಖ್ಯಮಂತ್ರಿ

ಹಿರಿಯ ರಾಜಕಾರಣಿ ಎನ್. ಡಿ. ತಿವಾರಿ ಆರೋಗ್ಯ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದ್ದು, ಮೂರು ದಿನಗಳಿಂದಲೂ ಇಲ್ಲಿನ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎನ್. ಡಿ. ತಿವಾರಿ
ಎನ್. ಡಿ. ತಿವಾರಿ

 ನವದೆಹಲಿ: ಹಿರಿಯ ರಾಜಕಾರಣಿ ಎನ್. ಡಿ. ತಿವಾರಿ ಆರೋಗ್ಯ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದ್ದು, ಮೂರು ದಿನಗಳಿಂದಲೂ  ಇಲ್ಲಿನ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎನ್ ಡಿ ತಿವಾರಿ ಅವರು ಬಹು ಅಂಗಾಂಗ ವೈಫಲ್ಯದ  ಸಮಸ್ಯೆ ಎದುರಿಸುತ್ತಿದ್ದು, ಅವರ ಆರೋಗ್ಯ  ಕ್ಷೀಣಿಸಿದೆ ಎಂದು  ಉತ್ತರ ಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ರಾವತ್ ಇಂದು   ಹೇಳಿದ್ದಾರೆ.

ಮೆದುಳಿನ ಸ್ಟ್ರೋಕ್ ಸಮಸ್ಯೆಯಿಂದಾಗಿ 92 ವರ್ಷದ ಹಿರಿಯ ರಾಜಕಾರಣಿ ಕಳೆದ ವರ್ಷ ಸೆಪ್ಟೆಂಬರ್ 20 ರಂದು ಸಕೇತ್ ನಲ್ಲಿನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಉತ್ತರ ಖಂಡ್ ರಾಜ್ಯದ ಮಾಜಿ ಮುಖ್ಯಮಂತ್ರಿಗಳ ಆರೋಗ್ಯ ಗಂಭೀರವಾಗಿದೆ ಎಂದು  ಆಸ್ಪತ್ರೆಯ ಮೂಲಗಳು ತಿಳಿಸಿವೆ.

ತಿವಾರಿ ಅವರನ್ನು ಐಸಿಯುಗೆ ಸ್ಥಳಾಂತರಿಸಲಾಗಿದ್ದು,  ಪರಿಸ್ಥಿತಿ ಗಂಭೀರವಾಗಿದೆ. ದೇಹದ ಯಾವುದೇ  ಅಂಗಗಳು ಕಾರ್ಯನಿರ್ವಹಿಸುತ್ತಿಲ್ಲ. ಹೆಚ್ಚಿನ ಔಷಧಿ ನೀಡುವುದಕ್ಕಿಂತಲೂ ಈಗ ಪ್ರಾರ್ಥನೆಯ ಅಗತ್ಯ ಹೆಚ್ಚಾಗಿದೆ ಎಂದು   ಅವರ ಮಗ ರೊಹಿತ್ ಶೇಖರ್ ತಿವಾರಿ ಆಸ್ಪತ್ರೆ ಆವರಣದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com