ಅಳುತ್ತಿದ್ದ ಮಗುವಿನ ಬಾಯಿಗೆ ಖಾರದ ಪುಡಿ ಹಾಕಿದ ಅಂಗನವಾಡಿ ಆಯಾ!

ಅಳು ನಿಲ್ಲಿಸದ ಕಾರಣ ಕ್ರೋಧಗೊಂಡ ಅಂಗನವಾಡಿ ಆಯಾ ಮಗುವಿನ ಬಾಯಿಗೆ ಖಾರದ ಪುಡಿ ಹಾಕಿರುವ ಭಯಾನಕ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ...
ಸಂತ್ರಸ್ತ ಮಗು
ಸಂತ್ರಸ್ತ ಮಗು
Updated on
ಕೃಷ್ಣ:  ಅಳು ನಿಲ್ಲಿಸದ ಕಾರಣ ಕ್ರೋಧಗೊಂಡ ಅಂಗನವಾಡಿ ಆಯಾ ಮಗುವಿನ ಬಾಯಿಗೆ ಖಾರದ ಪುಡಿ ಹಾಕಿರುವ ಭಯಾನಕ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಭೂಷಣಗುಲ್ಲಾ ಗ್ರಾಮದಲ್ಲಿ ಸೋಮವಾರ ಈ ಘಟನೆ ನಡೆದಿದೆ.
ದಿನನಿತ್ಯದಂತೆ ಸೋಮವಾರ ಕೂಡ ಮಗುವಿನ ತಾಯಿ ಅಂಗನವಾಡಿಗೆ ಮಗು ಬಿಟ್ಟು ಹೋಗಿದ್ದಾರೆ, ಈ ವೇಳೆ ಮಗು ಅಂಗನವಾಡಿಗೆ ಹೋಗಲು ನಿರಾಕರಿಸಿ ಅಳುತ್ತಿತ್ತು. ಅಳುತ್ತಿದ್ದ ಮಗವನ್ನು ಅಂಗನವಾಡಿಯಲ್ಲಿಯೇ ಬಿಟ್ಟು ತಾಯಿ ತೆರಳಿದ್ದರು.
ಮಗು ಸಮಾಧಾನವಾಗದೇ ಅಳುತ್ತಿದ್ದ ಹಿನ್ನೆಲೆಯಲ್ಲಿ  ಕೂಗಾಡಿದ ಆಯಾ, ಕುಮಾರಿ ಎಂಬಾಕೆ ಮಗುವಿನ ಬಾಯಿಗೆ ಮೆಣಸಿನಕಾಯಿ ಪುಡಿ ತುಂಬಿದ್ದಾಳೆ, ಈ ಸಂಬಂಧ ಪೋಷಕರು ಮತ್ತು ಸ್ಥಳೀಯರು ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com