ಶುಲ್ಕ ಬಾಕಿ ಹಿನ್ನೆಲೆ: ನರ್ಸರಿ ಮಕ್ಕಳನ್ನು ಬೇಸ್ ಮೆಂಟ್ ನಲ್ಲಿ ಲಾಕ್ ಮಾಡಿದ ಶಾಲೆ!

ಶಾಲೆಯ ಶುಲ್ಕವನ್ನು ಪಾವತಿಸದೆ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ದೆಹಲಿಯ ಪ್ರತಿಷ್ಠಿತ ಶಾಲೆಯೊಂದರ ಬೇಸ್‌ಮೆಂಟ್‌ನಲ್ಲಿ ಕನಿಷ್ಠ 16 ನರ್ಸರಿ ಬಾಲಕಿಯರನ್ನು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಶಾಲೆಯ ಶುಲ್ಕವನ್ನು ಪಾವತಿಸದೆ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ದೆಹಲಿಯ ಪ್ರತಿಷ್ಠಿತ ಶಾಲೆಯೊಂದರ ಬೇಸ್‌ಮೆಂಟ್‌ನಲ್ಲಿ ಕನಿಷ್ಠ 16 ನರ್ಸರಿ ಬಾಲಕಿಯರನ್ನು ಲಾಕ್‌ ಮಾಡಿಟ್ಟ ಆಘಾತಕಾರಿ ಘಟನೆ ವರದಿಯಾಗಿದೆ.
ಕಳೆದ ವಾರ ಮಧ್ಯಾಹ್ನ ಮಕ್ಕಳ ಪೋಷಕರು ತಮ್ಮ  ಮಕ್ಕಳನ್ನು ರಾಬಿಯಾ ಗರ್ಲ್ಸ್‌ ಪಬ್ಲಿಕ್‌ ಸ್ಕೂಲ್‌ ನಿಂದ ಮನೆಗೊಯ್ಯಲು ಶಾಲೆಗೆ ಬಂದಿದ್ದಾಗಲೇ "ಮಕ್ಕಳ ಒತ್ತೆ ಸೆರೆ' ಪ್ರಕರಣ ಬೆಳಕಿಗೆ ಬಂದಿದೆ,
ಬೆಳಗ್ಗೆ 7.30 ರಿಂದ ಮಧ್ಯಾಹ್ನ 12.30ರ ವರೆಗೂ ಮಕ್ಕಳನ್ನು ಹೆಚ್ಚಿನ ತಾಪಮಾನವಿರುವ ಬೇಸ್ ಮೆಂಟ್ ನಲ್ಲಿ ಕೂಡಿ ಹಾಕಲಾಗಿತ್ತು, ಮಕ್ಕಳು ಹಸಿವು ಬಾಯಾರಿಕೆ ಎಂದರೂ ಶಿಕ್ಷಕಿಯರು ಕೇರ್ ಮಾಡಿಲ್ಲ ಎಂದು ಆರೋಪಿಸಲಾಗಿದೆ.
ಶಾಲೆಯ ತರಗತಿ ಕೋಣೆಯಲ್ಲಿ ತಮ್ಮ ಮಕ್ಕಳು ಇಲ್ಲದಿರುವುದನ್ನು ಕಂಡ ಹೆತ್ತವರು ಶಾಲಾ ಸಿಬಂದಿಗಳನ್ನು ಪ್ರಶ್ನಿಸಿದಾಗ ಟ್ಯೂಶನ್‌ ಫೀ ಬಾಕಿ ಇಡಲಾಗಿರುವ ಕಾರಣ ಆಡಳಿತ ವರ್ಗದವರು ಶಾಲಾ ಕಟ್ಟಡದ ಬೇಸ್‌ಮೆಂಟ್‌ ನಲ್ಲಿ ಮಕ್ಕಳನ್ನು  (ತಳ ಅಂತಸ್ತಿನಲ್ಲಿ) ಲಾಕ್‌ ಮಾಡಿ ಇಟ್ಟಿದ್ದಾರೆ ಎಂದು ಉತ್ತರಿಸಿದರು. 
ನಾವು ಮಕ್ಕಳ ಫೀಸನ್ನು ಮುಂಗಡವಾಗಿ ಪಾವತಿಸಿದ್ದೇವೆ; ಆದರೂ ನಮ್ಮ ಮಕ್ಕಳನ್ನು ಒತ್ತೆ ಸೆರೆಯಲ್ಲಿ ಇರಿಸಿಕೊಂಡಿದ್ದಾರೆ ಎಂದು  ಕೆಲ ಪೋಷಕರು ದೂರಿದರು. 
ಇನ್ನೂ ರೆಬಿಯಾ ಗರ್ಲ್ಸ್ ಪಬ್ಲಿಕ್ ಸ್ಕೂಲ್ ನಲ್ಲಿ ಶುಲ್ಕ ಪಾವತಿಸದಿದ್ದಕ್ಕೆ 16 ವಿದ್ಯಾರ್ಥಿಗಳನ್ನು ಕೂಡಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ನೀಡುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೂಚಿಸಿದ್ದಾರೆ. ಶಾಲೆಯ ವಿರುದ್ಧ ಸ್ಥಳೀಯ ಪೊಲೀಸರು ಸೆಕ್ಷನ್ 75 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.
ಶಾಲೆಯ ಬೇಸ್ ಮೆಂಟ್ ನಲ್ಲಿ ವಿದ್ಯಾರ್ಥಿನಿಯರನ್ನು ಕೂಡಿ ಹಾಕಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಶಾಲೆಯ ಮುಖ್ಯ ಶಿಕ್ಷಕಿ ಪರಾ ದಿಬಾ ಈ ಆರೋಪವನ್ನು ನಿರಾಕರಿಸಿದ್ದಾರೆ. ಮಕ್ಕಳು ಬೇಸ್ ಮೆಂಟ್ ನಲ್ಲಿದ್ದದ್ದಕ್ಕೆ ಇಬ್ಬರು ಶಿಕ್ಷಕರು ಹೊಣೆಯಾಗಿದ್ದಾರೆ. ಎಂದು ಹೇಳಿದ್ದಾರೆ.
ಮಕ್ಕಳು ಬೇಸ್ ಮೆಂಟ್ ನಲ್ಲಿ ಆಟವಾಡಲು ತೆರಳಿದ್ದರು, ಅಂದು ಪ್ಯಾನ್ ಕೆಟ್ಟು ಹೋಗಿತ್ತು, ಮಕ್ಕಳನ್ನು ನಾವು ಲಾಕ್ ಮಾಡಿದ್ದೆವು ಎಂಬುದು ಸುಳ್ಳು ಆರೋಪ ಎಂದು ಸ್ಪಷ್ಟ ಮುಖ್ಯ ಶಿಕ್ಷಕಿ ಸ್ಪಷ್ಟ ಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com