ಶ್ರೇಷ್ಠತೆಯ ಪಟ್ಟಕ್ಕೆ ಅರ್ಜಿ ಸಲ್ಲಿಸಲು ವೇದಾಂತ ಸಮೂಹದ ಶಿಕ್ಷಣ ಸಂಸ್ಥೆಗೆ ಕೇಂದ್ರದಿಂದ ಗಡುವು ವಿಸ್ತರಣೆ

ಕೇಂದ್ರ ಸರ್ಕಾರ ವೇದಾಂತ ಸಮೂಹದ ಶಿಕ್ಷಣ ಸಂಸ್ಥೆಗೆ ಶ್ರೇಷ್ಠತೆಯ ಪಟ್ಟಕ್ಕಾಗಿ ಅರ್ಜಿ ಸಲ್ಲಿಸಲು ಗಡುವು ವಿಸ್ತರಣೆ ಮಾಡಿರುವುದು ಬೆಳಕಿಗೆ ಬಂದಿದೆ.
ಶ್ರೇಷ್ಠತೆಯ ಪಟ್ಟಕ್ಕೆ ಅರ್ಜಿ ಸಲ್ಲಿಸಲು ವೇದಾಂತ ಸಮೂಹದ ಶಿಕ್ಷಣ ಸಂಸ್ಥೆಗೆ ಕೇಂದ್ರದಿಂದ ಗಡುವು ವಿಸ್ತರಣೆ
ಶ್ರೇಷ್ಠತೆಯ ಪಟ್ಟಕ್ಕೆ ಅರ್ಜಿ ಸಲ್ಲಿಸಲು ವೇದಾಂತ ಸಮೂಹದ ಶಿಕ್ಷಣ ಸಂಸ್ಥೆಗೆ ಕೇಂದ್ರದಿಂದ ಗಡುವು ವಿಸ್ತರಣೆ
ನವದೆಹಲಿ: ಇನ್ನೂ ನಿರ್ಮಾಣವೇ ಆಗಿರದ ಜಿಯೋ ಶಿಕ್ಷಣ ಸಂಸ್ಥೆಗೂ ಶ್ರೇಷ್ಠ ಗುಣಮಟ್ಟದ ಶಿಕ್ಷಣ ಸಂಸ್ಥೆ ಎಂಬ ಮಾನ್ಯತೆ ನೀಡಿರುವ ವಿವಾದದ ಬೆನ್ನಲ್ಲೇ ಕೇಂದ್ರ ಸರ್ಕಾರ ವೇದಾಂತ ಸಮೂಹದ ಶಿಕ್ಷಣ ಸಂಸ್ಥೆಗೆ ಶ್ರೇಷ್ಠತೆಯ ಪಟ್ಟಕ್ಕಾಗಿ ಅರ್ಜಿ ಸಲ್ಲಿಸಲು ಗಡುವು ವಿಸ್ತರಣೆ ಮಾಡಿರುವುದು ಬೆಳಕಿಗೆ ಬಂದಿದೆ 
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿಯ ಪ್ರಕಾರ ವೇದಾಂತ ಸಮೂಹ ಸಂಸ್ಥೆಗೆ ಸೇರಿದ ಒಡಿಶಾ ವಿವಿಗೆ ಶ್ರೇಷ್ಠತೆಯ ಪಟ್ಟಕ್ಕಾಗಿ ಅರ್ಜಿ ಸಲ್ಲಿಸಲು ಇದ್ದ ಗಡುವನ್ನು ಒಂದು ತಿಂಗಳವರೆಗೆ ವಿಸ್ತರಿಸಿತ್ತು. ಬೇರೆ ವಿವಿಗಳೊಂದಿಗೆ ವೇದಾಂತ ಸಮೂಹದ ವಿವಿಯ ಪರಿಗಣನೆಯಲ್ಲಿದೆ. ಆದರೆ ಅರ್ಜಿ  ಸಲ್ಲಿಸಲು ನೀಡಲಾಗಿದ್ದ ಗಡುವನ್ನು ವಿಸ್ತರಿಸಲಾಗಿರುವುದರ ಬಗ್ಗೆ ಚರ್ಚೆಯಾಗುತ್ತಿದ್ದು ಹೆಚ್ ಆರ್ ಡಿ ಇಲಾಖೆ ಕಾರ್ಯದರ್ಶಿ ಆರ್ ಸುಬ್ರಹ್ಮಣ್ಯಂ, ವೇದಾಂತ ವಿವಿಯ ಮನವಿಯ ಮೇರೆಗೆ ಗಡುವು ವಿಸ್ತರಣೆ ಮಾಡಲಾಗಿತ್ತು ಎಂದು ಹೇಳಿದ್ದಾರೆ. 
ಜಿಯೋ ಸಂಸ್ಥೆಯ ಅರ್ಜಿ ನಿಗದಿತ ಸಮಯಕ್ಕೆ ಬಂದಿತ್ತು. ಆದರೆ ವೇದಾಂತ ಸಂಸ್ಥೆ ಅರ್ಜಿ ಸಲ್ಲಿಸುವುದಕ್ಕೆ ಗಡುವು ವಿಸ್ತರಿಸಲು ಮನವಿ ಮಾಡಿತ್ತು ಈ ಹಿನ್ನೆಲೆಯಲ್ಲಿ ಗಡುವು ವಿಸ್ತರಣೆ ಮಾಡಲಾಗಿತ್ತು ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com