ಮದರ್ ತೆರೇಸಾ ಮಿಷನರೀಸ್ ಆಫ್ ಚಾರಿಟಿ ಮೇಲೆ ಬಿಜೆಪಿ ಟಾರ್ಗೆಟ್ - ಮಮತಾ

ನೋಬೆಲ್ ಶಾಂತಿ ಪುರಸ್ಕೃತೆ ಮದರ್ ತೆರೇಸಾ ಸ್ಥಾಪಿಸಿರುವ ಮಿಷನರಿ ಆಫ್ ಚಾರಿಟಿಗಳನ್ನು ಬಿಜೆಪಿ ಟಾರ್ಗೆಟ್ ಮಾಡುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಮದರ್ ತೆರೇಸಾ
ಮದರ್ ತೆರೇಸಾ

ಕೊಲ್ಕತ್ತಾ: ನೋಬೆಲ್ ಶಾಂತಿ ಪುರಸ್ಕೃತೆ ಮದರ್ ತೆರೇಸಾ ಸ್ಥಾಪಿಸಿರುವ ಮಿಷನರಿ ಆಫ್ ಚಾರಿಟಿಗಳನ್ನು  ಬಿಜೆಪಿ  ಟಾರ್ಗೆಟ್ ಮಾಡುತ್ತಿದೆ ಎಂದು  ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ನಿರ್ಮಲ್ ಹೃದೈ ಮಹಿಳಾ ಸಿಬ್ಬಂದಿಯನ್ನು ಧರ್ಮದ ಆಧಾರದ ಮೇಲೆ ಬಿಜೆಪಿ ಬಂಧಿಸಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ರಾಂಚಿಯಲ್ಲಿರುವ ನಿರ್ಮಲ್ ಹೃದಯ ವಸತಿ ಕೇಂದ್ರದಿಂದ ಕಳೆದ ವಾರ  ಮಗುವೊಂದನ್ನು  ಉತ್ತರ ಪ್ರದೇಶದ ದಂಪತಿಯೊಬ್ಬರಿಗೆ ಮಾರಾಟ ಮಾಡಿರುವ ಆರೋಪ ಕೇಳಿಬಂದಿತ್ತು.

ಉತ್ತರ ಪ್ರದೇಶದಿಂದ ಬಂದಂತಹ  ದಂಪತಿಗಳಿಗೆ  ಚಿಕ್ಕಮಗುವೊಂದನ್ನು ಮಾರುವ ಆರೋಪದಲ್ಲಿ ಕಳೆದ ವಾರ ರಾಂಚಿಯಲ್ಲಿರುವ   ನಿರ್ಮಲ್  ಹೃದೈ ಆಶ್ರಯ ಕೇಂದ್ರದ ಮಹಿಳಾ ಸಿಬ್ಬಂದಿ ಮತ್ತು ಧಾರ್ಮಿಕ ಆದೇಶದ ಸಹೋದರಿಯನ್ನು ಬಿಜೆಪಿ ಬಂಧಿಸಿತ್ತು ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

 ಮದರ್ ತೆರೇಸಾ ಸ್ವಸಾಮರ್ಥ್ಯದಿಂದ ಮಿಷನರಿ ಆಫ್   ಚಾರಿಟಿಗಳನ್ನು ಸ್ಥಾಪಿಸಿದ್ದಾರೆ.  ಅವುಗಳ ಮೇಲೂ ಈಗ ದಾಳಿ ನಡೆಯುವ ಪ್ರಯತ್ನ ನಡೆಯುತ್ತಿದೆ. ಅಲ್ಲಿನ ಸಿಸ್ಟರ್ ಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಇದೊಂದು ಖಂಡನಾರ್ಹವಾದದ್ದು ಎಂದು ಮಮತಾ ಬ್ಯಾನರ್ಜಿ ಟ್ವಿಟ್ ಮಾಡಿದ್ದಾರೆ.

ಆಶ್ರಯ ಕೇಂದ್ರದಿಂದ ಮಗು ಮಾರಾಟ ಪ್ರಕರಣದ ಬಗ್ಗೆ ಜಾರ್ಖಂಡ್ ಮುಖ್ಯಮಂತ್ರಿ ರಘುಬಾರ್ ದಾಸ್   ರಾಜ್ಯ ಮಕ್ಕಳ ರಕ್ಷಣಾ ಆಯೋಗದಿಂದ ತನಿಖೆಗೆ ಆದೇಶಿಸಿದ್ದಾರೆ.

 ಜಾರ್ಖಂಡ್ ನ ಸಿಮ್ ದೇಗಾ ಜಿಲ್ಲೆಯ ಆಶ್ರಯ ಮನೆಯಿಂದ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದ ಮಗುವೊಂದನ್ನು ಪೊಲೀಸರು ನಿನ್ನೆದಿನ ರಕ್ಷಿಸಿದ್ದಾರೆ. ಇದೇ ರೀತಿಯಲ್ಲಿ ಮೂರು ಮಗುವನ್ನು ರಕ್ಷಿಸಲಾಗಿದೆ. ಈ ಸಂಬಂಧ ಕೆಲವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು  ಹಿರಿಯ ಪೊಲೀಸ್ ಅಧಿಕಾರಿ ಅನಿಸ್ ಗುಪ್ತಾ ಹೇಳಿದ್ದಾರೆ.

 ನಿರ್ಮಲ್  ಹೃದೈ ಆಶ್ರಯ ಕೇಂದ್ರದ ಸಿಬ್ಬಂದಿ ಅನಿಮಾ ಇಂದ್ವಾರ್ ವಿರುದ್ಧ ಅಕ್ರಮ ಮಗು ಮಾರಾಟ ಹಿನ್ನೆಲೆಯಲ್ಲಿ ರಾಂಚಿ ಮಕ್ಕಳ ಕಲ್ಯಾಣ ಸಮಿತಿ ಮುಖ್ಯಸ್ಥೆ ರೂಪಾ ವರ್ಮಾ ದೂರು ದಾಖಲಿಸಿದ್ದರು.

ಪ್ರಕರಣ ಬೆಳಕಿಗೆ ಬಂದ ನಂತರ ಈ ಆಶ್ರಯ ಕೇಂದ್ರಕ್ಕೆ ಬೀಗ ಜಡಿಯಲಾಗಿತ್ತು, ಇದರ ಮುಖ್ಯ ಕಚೇರಿ ಕೊಲ್ಕತ್ತಾದಲ್ಲಿದ್ದು, ಸತ್ಯಾಸತ್ಯತೆ ಪತ್ತೆಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕಳೆದ ವಾರ ಹೇಳಿಕೆ ನೀಡಿತ್ತು.

ಇಂತಹ ಸುದ್ದಿ ಕೇಳಿ ಆಘಾತವಾಗಿದೆ.ಮೂರು ವರ್ಷಗಳ ಹಿಂದಿನಿಂದಲೂ ಯಾವುದೇ ಮಕ್ಕಳನ್ನು ಆಶ್ರಯ ಕೇಂದ್ರ ದತ್ತು ಪಡೆಯುತ್ತಿಲ್ಲ ಎಂದು ಪೌಂಢೇಶನ್ ನ ವಕ್ತಾರೆ ಸುನೀತಾ ಕುಮಾರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com