'ನಾನೇ ಸೂಪರ್ ಮ್ಯಾನ್ ಅಂತೀರಾ, ಕೆಲ್ಸಾನೇ ಮಾಡಲ್ಲ': ದೆಹಲಿ ಲೆ. ಗವರ್ನರ್ ಗೆ ಸುಪ್ರೀಂ ತರಾಟೆ

'ನಾನೇ ಸೂಪರ್ ಮ್ಯಾನ್ ಎಂದು ಹೇಳುತ್ತೀರಿ. ಆದರೆ ಯಾವುದೇ ಕೆಲಸ ಮಾಡುವುದಿಲ್ಲ' ಎಂದು ದೆಹಲಿ ಲೆಫ್ಟಿನೆಂಟ್...
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
ನವದೆಹಲಿ: 'ನಾನೇ ಸೂಪರ್ ಮ್ಯಾನ್ ಎಂದು ಹೇಳುತ್ತೀರಿ. ಆದರೆ ಯಾವುದೇ ಕೆಲಸ ಮಾಡುವುದಿಲ್ಲ' ಎಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರನ್ನು ಗುರುವಾರ ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚುತ್ತಿರುವ ಗಾರ್ಬೇಜ್ ಸಮಸ್ಯೆ ನಿರ್ವಹಿಸುವಲ್ಲಿ ಮತ್ತು ಅದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಲ್ಲಿ ನಾನು ವಿಫಲವಾಗಿದ್ದೇನೆ ಎಂದು ಅನಿಲ್ ಬೈಜಾಲ್ ಕೋರ್ಟ್ ಗೆ ತಿಳಿಸಿದರು. ಇದರಿಂದ ಆಕ್ರೋಶಗೊಂಡ ಸುಪ್ರೀಂ ಕೋರ್ಟ್, 'ನನಗೆ ಅಧಿಕಾರ ಇದೆ. ನಾನೇ ಸೂಪರ್ ಮ್ಯಾನ್ ಎಂದು ನೀವು ಹೇಳುತ್ತೀರಿ. ಆದರೆ ನೀವು ಏನೂ ಕೆಲಸ ಮಾಡುವುದಿಲ್ಲ' ಎಂದು ಚಾಟಿ ಬೀಸಿದೆ.
ಮಹಾನಗರ ಪಾಲಿಕೆಗಳ ವಿಚಾರದಲ್ಲಿ ಲೆಫ್ಟಿನೆಂಟ್ ಗವರ್ನರ್ ಗೆ ಅಧಿಕಾರ ಇದೆ. ಆದರೆ ಗಾರ್ಬೇಜ್ ಸಮಸ್ಯೆ ಪರಿಹರಿಸಲು ಅವರು ಯಾವುದೇ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಕೋರ್ಟ್ ಹೇಳಿದೆ.
ಸುಪ್ರೀಂ ಕೋರ್ಟ್ ದೇಶದಾದ್ಯಂತ ಘನ ತ್ಯಾಜ್ಯ ನಿರ್ವಹಣಾ ಸಮಸ್ಯೆ ಕುರಿತು ವಿಚಾರಣೆ ನಡೆಸುತ್ತಿದ್ದು, ಈ ವೇಳೆ ದೆಹಲಿ ಗಾರ್ಬೇಜ್ ಸಮಸ್ಯೆಗೆ ಯಾರನ್ನು ದೂರಬೇಕು. ಕೇಂದ್ರ ಸರ್ಕಾರವನ್ನಾ ಅಥವಾ ದೆಹಲಿ ಸರ್ಕಾರವನ್ನಾ ಎಂದು ಪ್ರಶ್ನಿಸಿತು.
ಇದೇ ವೇಳೆ, ರಾಷ್ಟ್ರರಾಜಧಾನಿ ಸಮಸ್ಯೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ದೂರುವಂತಿಲ್ಲ ಎಂದ ಕೋರ್ಟ್, ಲೆಫ್ಟಿನೆಂಟ್ ಗವರ್ನರ್ ತಮಗೆ ಅಧಿಕಾರ ಇದೆ ಎಂದು ಹೇಳಿದ್ದು, ಇದರಲ್ಲಿ ದೆಹಲಿ ಸಿಎಂ ಅನ್ನು ಎಳೆದು ತರಬೇಡಿ ಎಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com