ಪಿಡಿಪಿ ಪಕ್ಷವನ್ನು ಒಡೆಯಲು ಯತ್ನಿಸಿದರೆ ಗಂಭೀರ ಪರಿಣಾಮ: ಬಿಜೆಪಿಗೆ ಮೆಹಬೂಬಾ ಮುಫ್ತಿ ಎಚ್ಚರಿಕೆ

ಪಿಡಿಪಿಯನ್ನು ಒಡೆಯಲು ಯತ್ನಿಸಿದರೆ ಬಿಜೆಪಿ ಗಂಭೀರ ಪರಿಣಾಮ ಎದುರಿಸಲು ತಯಾರಾಗಬೇಕಾಗುತ್ತದೆ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ....
ಪಿಡಿಪಿಯನ್ನು ಒಡೆದರೆ ಗಂಭೀರ ಪರಿಣಾಮ, ಬಿಜೆಪಿಗೆ ಮೆಹಬೂಬಾ ಮುಫ್ತಿ ಎಚ್ಚರಿಕೆ
ಪಿಡಿಪಿಯನ್ನು ಒಡೆದರೆ ಗಂಭೀರ ಪರಿಣಾಮ, ಬಿಜೆಪಿಗೆ ಮೆಹಬೂಬಾ ಮುಫ್ತಿ ಎಚ್ಚರಿಕೆ
ಶ್ರೀನಗರ: ಪಿಡಿಪಿಯನ್ನು ಒಡೆಯಲು ಯತ್ನಿಸಿದರೆ ಬಿಜೆಪಿ ಗಂಭೀರ ಪರಿಣಾಮ ಎದುರಿಸಲು ತಯಾರಾಗಬೇಕಾಗುತ್ತದೆ ಎಂದು  ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ  ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಮೆಹಬೂಬ ಮುಫ್ತಿ ಎಚ್ಚರಿಸಿದ್ದಾರೆ.
1987ರಲ್ಲಿ ಏನಾಯಿತೆನ್ನುವುದನ್ನು ಬಿಜೆಪಿ ನೆನೆಸಿಕೊಳ್ಳಬೇಕು ಎಂದು ಹೇಳಿರುವ ಮುಫ್ತಿ ಕಾಶ್ಮೀರ ಬಿಜೆಪಿ ಮಾಡಿದ ಕೆಲಸದಿಂದ ಎಂತಹಾ ಪರಿಣಾಮ ಎದುರಿಸಬೇಕಾಯಿತು ಎನ್ನುವುದನ್ನು ಮರೆಯಬಾರದು ಎಂದಿದ್ದಾರೆ.
1987ರಂತೆಯೇ ಕೇಂದ್ರದ ಬಿಜೆಪಿಯು ರಾಜ್ಯದ ಜನತೆಯ ಮತದಾನದ  ಹಕ್ಕನ್ನು ಕಿತ್ತುಕೊಳ್ಳಬಯಸಿದರೆ, ಪಿಡಿಪಿಯನ್ನು ವಿಭಜಿಸಲು ಯತ್ನಿಸಿದರೆ ಕಾಶ್ಮೀರದಲ್ಲಿ ಇನ್ನಷ್ಟು ಸಂಖ್ಯೆಯ ಸಲಾಹದ್ದೀನ್ ಮತ್ತು ಯಾಸಿನ್ ಮಲಿಕ್ ಜನಿಸುತ್ತಾರೆ.ಇದು ಅಪಾಯಕಾರಿ ಬೆಳವಣಿಗೆಗೆ ಕಾರಣವಾಗಲಿದ ಎಂದು ಪಿಡಿಪಿ ಮುಖ್ಯಸ್ಥರು ಹೇಳಿದ್ದಾರೆ.
ಹುತಾತ್ಮರ ದಿನಾಚರಣೆಯ ಸ್ಮರಣಾರ್ಥವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ.
ಒಮರ್ ಅಬ್ದುಲ್ಲಾ ತಿರುಗೇಟು
ಪಕ್ಷ ಒಡೆದರೆ ಪ್ರತ್ಯೇಕತಾವಾದಿಗಳು ಹುಟ್ಟುತ್ತಾರೆ ಎನ್ನುವ ಪಿಡಿಪಿ ನಾಯಕಿ ಮುಫ್ತಿ ಹೇಳಿಕೆಗೆ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತಿರುಗೇಟು ನೀಡಿದ್ದಾರೆ. ಪಕ್ಷ ವಿಭಾಗವಾದರೆ ಯಾವ ಪ್ರತ್ಯೇಕತಾವಾದಿಗಳು ಜನಿಸಲಾರರು ಎಂದು ಅವರು ಹೇಳಿದ್ದಾರೆ.
ಪಿಡಿಪಿ ವಿಭಜನೆಯಾದರೆ ಯಾವ ಪ್ರತ್ಯೇಕತಾವಾದಿಗಳು ಹುತ್ಟುವುದಿಲ್ಲ, ಬದಲಾಗಿ ದೆಹಲಿಯು ಪಿಡಿ[ಇ ಒಡೆಯುವ ಮೂಲಕ ಕಾಶ್ಮೀರಿಗಳ ಮತವನ್ನು ವಿಭಜಿಸಲಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com