ಏಪ್ರಿಲ್ ನಲ್ಲಿ ಮೋದಿ ಚೀನಾಗೆ ಭೇಟಿ ನೀಡಿದ್ದನ್ನು ಉಲ್ಲೇಖಿಸಿರುವ ರಾಹುಲ್ ಗಾಂಧಿ, ಭಾರತದ ಇತಿಹಾಸದಲ್ಲಿ ಹಿಂದೆಂದೂ ಯಾವ ಪ್ರಧಾನಿಯೂ ವಿದೇಶಗಳ ಪ್ರಭಾವಕ್ಕೆ ಶರಣಾಗಿರಲಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಚೀನಾದೊಂದಿಗೆ ಗಡಿ ಪ್ರದೇಶಗಳಲ್ಲಿ ತ್ವರಿತವಾಗಿ ಕಾರ್ಯಾಚರಣೆ ಮಾಡುವ ಮೌಂಟೇನ್ ಸ್ಟ್ರೈಕ್ ಕಾರ್ಪ್ಸ್ ನ ಹೊಸ ವಿಭಾಗಕ್ಕೆ ಆರ್ಥಿಕ ಕಾರಣ ನೀಡಿ ಈ ಪ್ರಸ್ತಾಪವನ್ನು ಸೇನೆ ಮುಂದೂಡಿತ್ತು. ಈ ಬಗ್ಗೆ ಪ್ರಸ್ತಾಪಿಸಿರುವ ರಾಹುಲ್ ಗಾಂಧಿ, "ನಮ್ಮ ಪ್ರಧಾನಿಯ ಚೀನಾ ಭೇಟಿಗೆ ಅಜೆಂಡಾ ಇರಲೇ ಇಲ್ಲ ಎಂದು ಟೀಕಾಪ್ರಹಾರ ನಡೆಸಿದ್ದು, ಚೀನಾದ ಗೌಪ್ಯ ಅಜೆಂಡಾ ಈಗ ಬಹಿರಂಗವಾಗುತ್ತಿದೆ. ಆದರೆ ಈಗಿನ ಪ್ರಧಾನಿ ವಿದೇಶಗಳ ಪ್ರಭಾವಕ್ಕೆ ಶರಣಾಗುತ್ತಿರುವಂತೆ ಈ ಹಿಂದಿನ ಯಾವ ಪ್ರಧಾನಿಗಳೂ ಶರಣಾಗಿರಲಿಲ್ಲ, ಈಗ ಬಿಜೆಪಿಯ ರಾಷ್ಟ್ರೀಯವಾದ ಬಹಿರಂಗವಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.