ಮಧುರೈ ಕಾಮರಾಜ ವಿವಿ ಲೈಂಗಿಕ ಹಗರಣ: ಜಾರ್ಜ್ ಶೀಟ್ ದಾಖಲು

ದೇವಾಂಗ ಕಲಾ ಕಾಲೇಜಿನ ಸಹಾಯಕ ಪ್ರೋಫೆಸರ್ ನಿರ್ಮಲಾ ದೇವಿ ಕೆಲ ಯುವತಿಕರಿಗೆ ಪ್ರಚೋದನೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿ- ಸಿಐಡಿ ಘಟಕ ಇಲ್ಲಿನ ಜ್ಯೂಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ 1160 ಪುಟಗಳ ಜಾರ್ಜ್ ಶೀಟ್ ದಾಖಲಿಸಿದೆ.
ಅಸಿಸ್ಟೆಂಟ್ ಪ್ರೋಫೆಸರ್ ನಿರ್ಮಲಾ ದೇವಿ, ಕಾಲೇಜು
ಅಸಿಸ್ಟೆಂಟ್ ಪ್ರೋಫೆಸರ್ ನಿರ್ಮಲಾ ದೇವಿ, ಕಾಲೇಜು
ವಿರುದ್ ನಗರ್ : ಹಿರಿಯ ಅಧಿಕಾರಿಗಳೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ದೇವಾಂಗ ಕಲಾ ಕಾಲೇಜಿನ  ಸಹಾಯಕ ಪ್ರೋಫೆಸರ್  ನಿರ್ಮಲಾ ದೇವಿ ಕೆಲ ಯುವತಿಕರಿಗೆ  ಪ್ರಚೋದನೆ  ನೀಡಿದ   ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿ- ಸಿಐಡಿ ಘಟಕ  ಇಲ್ಲಿನ  ಜ್ಯೂಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ 1160 ಪುಟಗಳ ಜಾರ್ಜ್ ಶೀಟ್ ದಾಖಲಿಸಿದೆ.
ಈ ಪ್ರಕರಣ ಸಂಬಂಧ ನಿರ್ಮಲಾ ದೇವಿ ದೂರವಾಣಿ ಮೂಲಕ ನಡೆಸಿದ ಸಂಭಾಷಣೆ ತಮಿಳುನಾಡು ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಏಪ್ರಿಲ್ 16 ರಂದು ನಿರ್ಮಲಾ ದೇವಿಯನ್ನು ಬಂಧಿಸಿದ ಪೊಲೀಸರು , ಪ್ರಕರಣವನ್ನು ಸಿಬಿ- ಸಿಐಡಿ ಘಟಕಕ್ಕೆ ವಹಿಸಿದ್ದರು.
ಸಿಬಿ-ಸಿಐಡಿ ಘಟಕದ ಎಸ್ಪಿ ರಾಜೇಶ್ವರಿ ನೇತೃತ್ವದ ತಂಡ ಏ.19 ರಂದು ತನಿಖೆ ನಡೆಸುತ್ತಿದೆ. ನಿರ್ಮಲಾ ದೇವಿ  ತಪ್ಪೊಪ್ಪಿಕೆ ಹೇಳಿಕೆ ಆಧಾರದ ಮೇಲೆ  ಮಧುರೈ ಕಾಮರಾಜ ಕಾಲೇಜಿನ  ವಿದ್ಯಾರ್ಥಿ ಕರುಪ್ಪಯ್ಯ  ಹಾಗೂ ಅಸ್ಟಿಸ್ಟೆಂಟ್ ಪ್ರೊಫೆಸರ್  ವಿ. ಮುರುಗನ್ ಎಂಬವರನ್ನು  ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಸಿಬಿ- ಸಿಐಡಿ ತಂಡ ಮಧುರೈ ಕಾಮರಾಜ ಕಾಲೇಜಿನ ಅಧಿಕಾರಿಗಳು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ದೇವಾಂಗ ಕಲಾ, ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಿದ್ದು,  ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ.
ನಿರ್ಮಲಾ ದೇವಿ, ಮುರುಗನ್, ಕುರುಪ್ಪಯ್ಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅವರು ಜಾಮೀನಿಗಾಗಿ  ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿದೆ.
ಚೆನ್ನೈನಲ್ಲಿ ನಿರ್ಮಲಾ ದೇವಿ ಧ್ವನಿ ಪರೀಕ್ಷೆ ನಡೆಸಲಾಗಿದ್ದು,  ಆಡಿಯೋದಲ್ಲಿರುವ  ಧ್ವನಿ ನಿರ್ಮಲಾ ದೇವಿಯದ್ದೇ ಎಂದು ಮದ್ರಾಸ್ ಹೈಕೋರ್ಟಿನ ಮಧುರೈ ಪೀಠ, ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯ ಸ್ಪಷ್ಟಪಡಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com