ಜಾರ್ಖಂಡ್ ನಲ್ಲಿ ಮಕ್ಕಳ ಮಾರಾಟ ಜಾಲ: ತಪ್ಪೊಪ್ಪೊಕೊಂಡ ಮಿಷನರೀಸ್​ ಆಫ್​ ಚಾರಿಟಿ!

ಜಾರ್ಖಂಡ್ ನಲ್ಲಿ ಮಕ್ಕಳ ಮಾರಾಟ ಜಾಲದಲ್ಲಿ ತೊಡಗಿದ್ದ ಮಿಷನರೀಸ್ ಆಫ್ ಚಾರಿಟಿ ಶಾಮೀಲಾಗಿರುವುದು ಬಹಿರಂಗಗೊಂಡಿದೆ.
ಜಾರ್ಖಂಡ್ ನಲ್ಲಿ ಮಕ್ಕಳ ಮಾರಾಟ ಜಾಲ: ತಪ್ಪೊಪ್ಪೊಕೊಂಡ ಮಿಷನರೀಸ್​ ಆಫ್​ ಚಾರಿಟಿ!
ಜಾರ್ಖಂಡ್ ನಲ್ಲಿ ಮಕ್ಕಳ ಮಾರಾಟ ಜಾಲ: ತಪ್ಪೊಪ್ಪೊಕೊಂಡ ಮಿಷನರೀಸ್​ ಆಫ್​ ಚಾರಿಟಿ!

ರಾಂಚಿ: ಜಾರ್ಖಂಡ್ ನಲ್ಲಿ ಮಕ್ಕಳ ಮಾರಾಟ ಜಾಲದಲ್ಲಿ ತೊಡಗಿದ್ದ ಮಿಷನರೀಸ್ ಆಫ್ ಚಾರಿಟಿ ಶಾಮೀಲಾಗಿರುವುದು ಬಹಿರಂಗಗೊಂಡಿದೆ. 

ಮದರ್ ಥೆರೇಸಾ ಸ್ಥಾಪಿಸಿದ್ದ ಮಿಷನರೀಸ್ ಆಫ್ ಚಾರಿಟಿ ನಿರ್ವಹಣೆ ಮಾಡುತ್ತಿದ್ದ ನಿರ್ಮಲ ಹೃದಯ ಸಂಸ್ಥೆಯ ಸಿಸ್ಟರ್ ಕೊನ್ಸಲಿಯಾ ತಾನು 3 ಮಕ್ಕಳನ್ನು ಮಾರಾಟ ಮಾಡಿ, ನಾಲ್ಕನೇ ಮಗುವನ್ನು ಮಾರಾಟ ಮಾಡುವುದರಲ್ಲಿದ್ದ ಬಗ್ಗೆ ಪೊಲೀಸ್ ಅಧಿಕಾರಿಗಳೆದುರು ತಪ್ಪೊಪ್ಪಿಕೊಂಡಿದ್ದಾರೆ. 

ಈ ಬಗ್ಗೆ ರಾಂಚಿಯ ಹಿರಿಯ ಎಸ್ ಪಿ ಅನಿಸ್ ಗುಪ್ತಾಮಾಹಿತಿ ನೀಡಿದ್ದು, " ತಾನು ಮೂರು ಪ್ರತ್ಯೇಕ ವ್ಯಕ್ತಿಗಳಿಗೆ ಮೂರು ಮಕ್ಕಳನ್ನು ಮಾರಾಟ ಮಾಡಿದ್ದನ್ನು ಸಿಸ್ಟರ್ ಕೊನ್ಸಲಿಯಾ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ, ಆದರೆ ಮಕ್ಕಳನ್ನು ಮಾರಾಟ ಮಾಡುವುದಕ್ಕೆ ಪಡೆದಿರುವ ಹಣದ ಬಗ್ಗೆ ಮಾಹಿತಿ ಬಹಿರಂಗಪಡಿಸಿಲ್ಲ" ಎಂದು ಪೊಲೀಸರು ಹೇಳಿದ್ದಾರೆ.

ಮಾರಾಟ ಮಾಡಲಾಗಿದ್ದ ಮಕ್ಕಳನ್ನು ರಕ್ಷಣೆ ಮಾಡಲಾಗಿದ್ದು, ಮಾರಾಟಕ್ಕೆ ಸಿದ್ಧತೆ ಮಾಡಿರುವ ನಾಲ್ಕನೇ ಮಗುವನ್ನು ಪತ್ತೆ ಮಾಡುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ. ಆದರೆ ಭಾರತದ ಕ್ಯಾಥೋಲಿಕ್ ಬಿಷಪ್ ಕಾನ್ಫರೆನ್ಸ್ ನ ಪ್ರಧಾನ ಕಾರ್ಯದರ್ಶಿ ಎಂಒಸಿ ವಿರುದ್ಧ ಕೇಳಿಬಂದಿರುವ ಆರೋಪವನ್ನು ತಳ್ಳಿಹಾಕಿದ್ದು, ಎಂಒಸಿ ಸಿಸ್ಟರ್ ಗೆ ಒತ್ತಡ ಹೇರಿ ಪೊಲೀಸರು ಈ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
 
ಸಿಸ್ಟರ್ ಕೊನ್ಸಲಿಯಾ ಹಾಗೂ ನಿರ್ಮಲ ಹೃದಯ್ ನ ನೌಕರರಾದ ಅನಿಮಾ ಇಂದ್ವಾರ್ ನ್ನು ಮಕ್ಕಳ ಮಾರಾಟ ಪ್ರಕರಣದ ಸಂಬಂಧ ಬಂಧಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com