ಇದೇ ಮೊದಲ ಬಾರಿಗೆ ಸತತ 6 ದಿನಗಳ ಕಾಲ ತಿರುಪತಿ ದೇವಾಲಯದ ಬಾಗಿಲು ಬಂದ್!

ಇದೇ ಮೊದಲ ಬಾರಿಗೆ ಸತತ 6 ದಿನಗಳ ಕಾಲ ತಿರುಪತಿ ದೇವಾಲಯದ ಬಾಗಿಲು ಬಂದ್ ಆಗಲಿದ್ದು, ಆಗಸ್ಟ್ 11 ರಿಂದ 16 ವರೆಗೂ ಭಕ್ತಾದಿಗಳಿಗೆ ದೇವಾಲಯದಲ್ಲಿ ದರ್ಶನಕ್ಕೆ ಅವಕಾಶ ಇರುವುದಿಲ್ಲ.

ಸಮಗ್ರ ಸ್ವಚ್ಛಗೊಳಿಸುವಿಕೆಗಾಗಿ 6 ದಿನಗಳ ಕಾಲ ತಿರುಪತಿ ದೇವಾಲಯದ ಬಾಗಿಲನ್ನು ಬಂದ್ ಆಗಲಿದೆ ಎಂದು ದೇವಾಲಯದ ಅಧಿಕಾರಿಗಳು ಹೇಳಿದ್ದಾರೆ. ದೇವಾಲಯದಲ್ಲಿ ಅಷ್ಟ ಬಂಧನ ಬಾಲಾಲಯ ಮಹಾ ಸಂಪ್ರೋಕ್ಷಣೆ ಕಾರ್ಯಕ್ರಮ ನಡೆಯಲಿದ್ದು, ಪ್ರತಿ 12 ವರ್ಷಗಳಿಗೊಮ್ಮೆ ಈ ಧಾರ್ಮಿಕ ಆಚರಣೆ ನಡೆಯಲಿದೆ. 
ಪ್ರತಿ 12 ವರ್ಷಗಳಿಗೊಮ್ಮೆ ಈ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆಯಾದರೂ ಸಹ ಇದೇ ಮೊದಲ ಬಾರಿಗೆ ಟಿಟಿಡಿ ದೇವಾಲಯದ ಬಾಗಿಲನ್ನು ಮುಚ್ಚುತ್ತಿದೆ. ಈ ಹಿಂದೆ 2006 ರಲ್ಲಿಯೂ ಸಹ ಈ ಧಾರ್ಮಿಕ ಕಾರ್ಯಕ್ರಮ ನಡೆದಿತ್ತು ಆದರೆ ಈಗಿನಷ್ಟು ಜನ ಸಂದಣಿ ಇಲ್ಲದೇ ಇದ್ದ ಕಾರಣದಿಂದಾಗಿ ದೇವಾಲಯದ ಬಾಗಿಲನ್ನು ಮುಚ್ಚಿರಲಿಲ್ಲ. ಈಗ ಪ್ರತಿ ದಿನ ದೇವಾಲಯಕ್ಕೆ ಭೇಟಿ ನೀಡುವವರ ಸಂಖ್ಯೆ 1 ಲಕ್ಷ ದಾಟಿರುವ ಹಿನ್ನೆಲೆಯಲ್ಲಿ ಈ ಬಾರಿಯ ಸಂಪ್ರೋಕ್ಷಣೆ ಕಾರ್ಯಕ್ರಮದಂದು ದೇವಾಲಯದ ಬಾಗಿಲನ್ನು ಮುಚ್ಚಲಾಗುತ್ತಿದೆ. 
ಎರಡನೆಯದ್ದಾಗಿ ಶನಿವಾರ, ಭಾನುವಾರ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಸಾಲು ಸಾಲು ರಜೆಗಳಿದ್ದು, ದರ್ಶನಕ್ಕೆ ನಿರ್ಬಂಧ ವಿಧಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸಂಪೂರ್ಣ ಒಂದು ವಾರ ದೇವಾಲಯದ ಬಾಗಿಲನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ಟಿಟಿಡಿ ಹೇಳಿದೆ. ಬೆಟ್ಟದ ಮೇಲೆ ತೆರಳುವ ಭಕ್ತಾದಿಗಳಿಗೆ ಆಗಸ್ಟ್ 9 ರಿಂದಲೇ ನಿರ್ಬಂಧ ವಿಧಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com