ಪ್ರತ್ಯೇಕತವಾದಿ ಆಸಿಯಾ ಅಂದ್ರಾಬಿ ಒಂದು ತಿಂಗಳ ಕಾಲ ನ್ಯಾಯಾಂಗ ಬಂಧನಕ್ಕೆ

ಪಾಕಿಸ್ತಾನದ ಬೆಂಬಲದೊಂದಿಗೆ ದೇಶದ ವಿರುದ್ದವೇ ಪಿತ್ತೂರಿ ನಡೆಸುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಇಂದು ಕಾಶ್ಮೀರದ ಪ್ರತ್ಯೇಕತವಾದಿ ಆಸಿಯಾ ಅಂದ್ರಾಬಿಯನ್ನು ಒಂದು ತಿಂಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಆಸಿಯಾ ಅಂದ್ರಾಬಿ
ಆಸಿಯಾ ಅಂದ್ರಾಬಿ

ನವದೆಹಲಿ:ಪಾಕಿಸ್ತಾನದ ಬೆಂಬಲದೊಂದಿಗೆ  ದೇಶದ ವಿರುದ್ದವೇ  ಪಿತ್ತೂರಿ ನಡೆಸುತ್ತಿದ್ದ  ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಇಂದು ಕಾಶ್ಮೀರದ ಪ್ರತ್ಯೇಕತವಾದಿ ಆಸಿಯಾ ಅಂದ್ರಾಬಿಯನ್ನು  ಒಂದು ತಿಂಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಅಂದ್ರಾಬಿ  ನಿಷೇಧಿತ ದುಕ್ ತರೇನ್ -ಇ- ಮಿಲತ್ ಸಂಘಟನೆಯ ಮುಖ್ಯಸ್ಥೆಯಾಗಿದ್ದು,  10 ದಿನಗಳ ಎನ್ ಐಎ ವಶದ ನಂತರ ಇಬ್ಬರು ಮಹಿಳಾ ಸಹಚರರೊಂದಿಗೆ ಆಕೆಯನ್ನು  ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಹೆಚ್ಚಿನ ವಿಚಾರಣೆಯ ಅಗತ್ಯವಿಲ್ಲ ಎಂದು ಎನ್ ಐಎ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಧೀಶ ಪೊನಾಮ್ ಎ ಬಾಂಬ ಅವರು ಮೂವರು ಆರೋಪಿಗಳನ್ನು  ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

ನೆರೆಯ ಪಾಕಿಸ್ತಾನದ ಬೆಂಬಲ ಪಡೆದು ದೇಶದ ಸಾರ್ವಭೌಮತ್ವ ಹಾಗೂ ಸಮಗ್ರತೆಗೆ ಧಕ್ಕೆ ತರುವಂತಹ ಪಿತೂರಿ ಕೆಲಸದಲ್ಲಿ ತೊಡಗಿದ್ದರು ಎಂದು ಎನ್ ಐಎ ಹೇಳಿಕೆ ನೀಡಿತ್ತು.

ಮೂವರು ಆರೋಪಿಗಳನ್ನು ತಿಹಾರ್ ನ ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿದೆ. ಅಂದ್ರಾಬಿ ಜೊತೆಗೆ ಆಕೆಯ ಸಹಚರರಾದ ಸೊಪಿ ಫೇಮೀದಾ, ಮತ್ತು ನಹಿದಾ ನಸ್ರೀನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಳೆದ ವರ್ಷ ಏಪ್ರಿಲ್ 1 ರಂದು ಈ ಮೂವರು ಮಹಿಳೆಯರ ವಿರುದ್ಧ ಪ್ರಕರಣ ದಾಖಲಾಗಿತ್ತು.  ಕಳೆದ ತಿಂಗಳು ಜಮ್ಮು-ಕಾಶ್ಮೀರ ಹೈಕೋರ್ಟ್ ಜಾಮೀನು ರದ್ದುಪಡಿಸಿದ ಹಿನ್ನೆಲೆಯಲ್ಲಿ ಅಂದ್ರಾಬಿಯನ್ನು ಶ್ರೀನಗರದ ಕಾರಾಗೃಹದಲ್ಲಿ ಇರಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com