160 ಕೆಜಿ ಗೂ ಹೆಚ್ಚು ಚಿನ್ನ ಲೇಪಿತದಿಂದ ಹೊಳೆಯುತ್ತಿದೆ ' ಗೋಲ್ಡನ್ ಟೆಂಪಲ್ '

ಸಿಖ್ ರ ಪವಿತ್ರ ಪುಣ್ಯ ಕ್ಷೇತ್ರ ಗೋಲ್ಡನ್ ಟೆಂಪಲ್ ನ ನಾಲ್ಕು ಪ್ರವೇಶ ದ್ವಾರಗಳು 50 ಕೋಟಿ ರೂಪಾಯಿ ಮೌಲ್ಯದ 160 ಕೆಜಿ ಬಂಗಾರದಿಂದ ಲೇಪಿತಗೊಂಡಿದ್ದು, ಮಿರಮಿರನೆ ಹೊಳೆಯುತ್ತಿವೆ.
ಗೋಲ್ಡನ್ ಟೆಂಪಲ್
ಗೋಲ್ಡನ್ ಟೆಂಪಲ್

ಅಮೃತಸರ: ಸಿಖ್ ರ ಪವಿತ್ರ ಪುಣ್ಯ ಕ್ಷೇತ್ರ ಗೋಲ್ಡನ್ ಟೆಂಪಲ್  ನ ನಾಲ್ಕು ಪ್ರವೇಶ ದ್ವಾರಗಳು  50 ಕೋಟಿ ರೂಪಾಯಿ ಮೌಲ್ಯದ 160 ಕೆಜಿ ಬಂಗಾರದಿಂದ ಲೇಪಿತಗೊಂಡಿದ್ದು, ಮಿರಮಿರನೆ ಹೊಳೆಯುತ್ತಿದೆ.

ನಾಲ್ಕು ಪ್ರವೇಶದ್ವಾರಗಳ ಜೊತೆಗೆ ಪವಿತ್ರ  ಸರೋವರದ ಮಧ್ಯಭಾಗದಲ್ಲಿನ ಹರ್ಮಂದರ್ ಸಾಹೀಬ್ ಮಂದಿರ  ,  ಅಕಲ್ ತಖ್ತ್ ಗುಮ್ಮಟಗಳು, ಹಾಗೂ ಗರ್ಭಗುಡಿ ಪ್ರವೇಶದ್ವಾರವನ್ನು ಚಿನ್ನದಿಂದ ಲೇಪಿತಗೊಳಿಸಲಾಗಿದೆ.

ಗೋಲ್ಡನ್ ಟೆಂಪಲ್ ನ ಪ್ರವೇಶ ದ್ವಾರಗಳು ಎಲ್ಲರಿಗೂ ಮುಕ್ತಗೊಂಡಿರುತ್ತವೆ ಎಂಬ ಸಂಕೇತದ ಹಿನ್ನೆಲೆಯಲ್ಲಿ  ನಾಲ್ಕು ಪ್ರವೇಶ ದ್ವಾರಗಳನ್ನು ಚಿನ್ನದಿಂದ ಲೇಪಿತಗೊಳಿಸಲು ನಿರ್ಧರಿಸಲಾಯಿತು ಎಂದು ಶಿರೋಮಣಿ ಗುರುದ್ವಾರ ಪರಬಂದಕ್ ಕಮಿಟಿಯ ಹೆ್ಚ್ಟುವರಿ ಕಾರ್ಯದರ್ಶಿ ದಿಲ್ಜಿತ್ ಸಿಂಗ್ ಬೇಡಿ ತಿಳಿಸಿದ್ದಾರೆ.

ಸಿಖ್ ಆಡಳಿತಗಾರ ಮಹಾರಾಜ ರಂಜಿತ್ ಸಿಂಗ್ 192 ವರ್ಷಗಳ ಹಿಂದೆ 16.39 ಲಕ್ಷ ವೆಚ್ಚದಲ್ಲಿ (ಸೊನ್ ಡಿ ಸೇವಾ) ಚಿನ್ನದಿಂದ ಸೇವೆ ಮಾಡಿದ್ದರು. ಮೊಹಮ್ಮದ್ ಖಾನ್ ಮೊದಲ ಚಿನ್ನ ಲೇಪಿತಗೊಳಿಸಿದ ಮೊದಲ ಕುಶಲಕರ್ಮಿ, ರಂಜಿತ್ ಸಿಂಗ್ ನಂತರ ಆತನ ರಾಣಿಯರು , ಮತ್ತಿತರರು ಈ ಸೇವೆಗಾಗಿ ಕೊಡುಗೆ ನೀಡುತ್ತಾ ಬಂದಿದ್ದರು. ಆ ಅವಧಿಯಲ್ಲಿ ಸುಮಾರು 64. 11 ಲಕ್ಷ ವೆಚ್ಚ ಮಾಡಲಾಗಿತ್ತು ಎಂದು ತ್ವಾರಿಖ್ ಶ್ರೀ ಅಮೃತಸರ ಪುಸ್ತಕದಿಂದ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com