ಕಾಂಗ್ರೆಸ್ ದೇವೇಗೌಡ, ಐಕೆ ಗುಜ್ರಾಲ್ ಗೆ ಮಾಡಿದ್ದನ್ನೇ ಕುಮಾರಸ್ವಾಮಿಗೂ ಮಾಡುತ್ತಿದೆ: ಅರುಣ್ ಜೇಟ್ಲಿ

ಕಾಂಗ್ರೆಸ್ ದೇವೇಗೌಡ, ಐಕೆ ಗುಜ್ರಾಲ್, ಚರಣ್ ಸಿಂಗ್, ಚಂದ್ರಶೇಖರ್ ಅವರಿಗೆ ಮಾಡಿದ್ದನ್ನೇ ಕುಮಾರಸ್ವಾಮಿಗೂ ಮಾಡುತ್ತಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಆರೋಪಿಸಿದ್ದಾರೆ.
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ
"ಮುಖ್ಯಮಂತ್ರಿಯಾದರೂ ಸಂತೋಷವಾಗಿಲ್ಲ" ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ  ಕಣ್ಣೀರಿಟ್ಟಿರುವುದು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಕಾಂಗ್ರೆಸ್ ದೇವೇಗೌಡ, ಐಕೆ ಗುಜ್ರಾಲ್, ಚರಣ್ ಸಿಂಗ್, ಚಂದ್ರಶೇಖರ್ ಅವರಿಗೆ ಮಾಡಿದ್ದನ್ನೇ ಕುಮಾರಸ್ವಾಮಿಗೂ ಮಾಡುತ್ತಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಆರೋಪಿಸಿದ್ದಾರೆ. 
ಕಾಂಗ್ರೆಸ್ ಕುಮಾರಸ್ವಾಮಿ ಅವರನ್ನು ಖಿನ್ನತೆಗೆ ದೂಡಿದೆ ಎಂದು ಆರೋಪಿಸಿರುವ ಅರುಣ್ ಜೇಟ್ಲಿ, ಕೇವಲ ಮೋದಿಯನ್ನು ಅಧಿಕಾರದಿಂದ ದೂರವಿಡುವುದಕ್ಕಾಗಿ ಸೈದ್ಧಾಂತಿಕ ವಿರೋಧಿಗಳೊಂದಿಗೆ ಕಾಂಗ್ರೆಸ್ ಅವಕಾಶವಾದಿತನದ ಮೈತ್ರಿ ಮಾಡಿಕೊಳ್ಳುತ್ತಿದೆ ಎಂದು ಜೇಟ್ಲಿ ಫೇಸ್ ಬುಕ್ ಪೋಸ್ಟ್ ನಲ್ಲಿ ಆರೋಪಿಸಿದ್ದಾರೆ. 
ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಲು ನಿರಾಕರಿಸಿದ ಕುಮಾರಸ್ವಾಮಿ ಕಣ್ಣೀರಿಟ್ಟಿದ್ದು ನಮಗೆಲಾ ಗೊತ್ತೇ ಇದೆ. ಕುಮಾರಸ್ವಾಮಿ ಅವರು ಕಣ್ಣೀರಿಟ್ಟಿದ್ದು, ನಮಗೆ ಹಳೆಯ ಹಿಂದಿ ಸಿನಿಮಾಗಳ ದಿನಗಳನ್ನು ನೆನಪಿಸುತ್ತವೆ ಎಂದು ಜೇಟ್ಲಿ ಹೇಳಿದ್ದಾರೆ. ಅವಕಾಶವಾದಿತನದ ಮೈತ್ರಿ ಎಂದಿಗೂ ವಿರೋಧಾಭಾಸದಿಂದಲೇ ಕೂಡಿರುತ್ತದೆ ಎಂದಿರುವ ಜೇಟ್ಲಿ ಈ ಹಿಂದೆಯೂ ಕಾಂಗ್ರೆಸ್ ಪಕ್ಷ ದೇವೇಗೌಡ, ಐಕೆ ಗುಜ್ರಾಲ್, ಚರಣ್ ಸಿಂಗ್, ಚಂದ್ರಶೇಖರ್ ಅವರ ಸರ್ಕಾರಕ್ಕೆ ಬೆಂಬಲ ನೀಡಿತ್ತು, ಆದರೆ ಅವರಿಗೂ ಕಿರುಕುಳ ನೀಡಿತ್ತು, ದೇವೇಗೌಡರಿಗೆ ಮಾಡಿದ್ದನ್ನೇ ಕಾಂಗ್ರೆಸ್ ಕುಮಾರಸ್ವಾಮಿಗೂ ಮಾಡುತ್ತಿದೆ ಎಂದು ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ. 
ಒಂದು ವೇಳೆ ಈ ಅವಕಾಶವಾದಿ ಮೈತ್ರಿಕೂಟ ಕೇಂದ್ರದಲ್ಲಿ ಅಧಿಕಾರ ಹಿಡಿದಿದ್ದೇ ಆದರೆ ಆ ಮೈತ್ರಿಕೂಟದ ಪ್ರಧಾನಿ ಕ್ಯಮರಾ ಮುಂದೆ ಕಣ್ಣೀರಿಡುವ ಸ್ಥಿತಿ ನಿರ್ಮಾಣವಾದರೆ ಅದು ಯುಪಿಎ-2 ಕ್ಕಿಂತಲೂ ಕೆಟ್ಟದ್ದಾಗಿರುತ್ತದೆ ಎಂದು ಜೇಟ್ಲಿ ಎಚ್ಚರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com