ಜಮ್ಮು-ಕಾಶ್ಮೀರದಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ 100 ಉಗ್ರರ ಹತ್ಯೆ, 43 ಭದ್ರತಾ ಸಿಬ್ಬಂದಿಗಳು ಹುತಾತ್ಮ- ಹಂಸರಾಜ್ ಅಹಿರ್

ಈ ವರ್ಷದಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ ಜಮ್ಮು-ಕಾಶ್ಮೀರದಲ್ಲಿ 100 ಉಗ್ರರು ಹತ್ಯೆಯಾಗಿದ್ದು, 43 ಭದ್ರತಾ ಸಿಬ್ಬಂದಿಗಳು ಹುತಾತ್ಮರಾಗಿದ್ದಾರೆ ಎಂದು ಗೃಹ ಖಾತೆ ರಾಜ್ಯಸಚಿವ ಹಂಸರಾಜ್ ಅಹಿರ್ ತಿಳಿಸಿದ್ದಾರೆ.
ಹಂಸರಾಜ್ ಅಹಿರ್
ಹಂಸರಾಜ್ ಅಹಿರ್
Updated on

ನವದೆಹಲಿ: ಈ ವರ್ಷದಲ್ಲಿ  ಕಳೆದ  ಆರು ತಿಂಗಳ ಅವಧಿಯಲ್ಲಿ  ಜಮ್ಮು-ಕಾಶ್ಮೀರದಲ್ಲಿ 100 ಉಗ್ರರು ಹತ್ಯೆಯಾಗಿದ್ದು, 43 ಭದ್ರತಾ ಸಿಬ್ಬಂದಿಗಳು ಹುತಾತ್ಮರಾಗಿದ್ದಾರೆ ಎಂದು  ಗೃಹ ಖಾತೆ ರಾಜ್ಯಸಚಿವ  ಹಂಸರಾಜ್ ಅಹಿರ್ ತಿಳಿಸಿದ್ದಾರೆ.

ಈ ಅವಧಿಯಲ್ಲಿ 16 ನಾಗರಿಕರು ಮೃತಪಟ್ಟಿದ್ದಾರೆ. 256 ಹಿಂಸಾಚಾರ ಪ್ರಕರಣಗಳು ನಡೆದಿವೆ ಎಂದು ಹಂಸರಾಜ್ ಅಹಿರ್ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

2017ರಲ್ಲಿ ಜಮ್ಮು-ಕಾಶ್ಮೀರದಲ್ಲಿ 342 ಹಿಂಸಾಚಾರ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 213 ಉಗ್ರರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಒಟ್ಟಾರೆಯಾಗಿ 80 ಭದ್ರತಾ ಸಿಬ್ಬಂದಿ ಮತ್ತು 40 ನಾಗರಿಕರು ಈ ವರ್ಷದಲ್ಲಿ  ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.

ಸುಮಾರು 82ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ, 15 ನಾಗರಿಕರು ಮತ್ತು  150 ಉಗ್ರರು  2016ರಲ್ಲಿ  ಮೃತಪಟ್ಟಿದ್ದಾರೆ.  322 ಕ್ಕೂ ಹೆಚ್ಚು ಉಗ್ರರ ಹಿಂಸಾಚಾರ ಪ್ರಕರಣಗಳಿಗೆ ಜಮ್ಮು-ಕಾಶ್ಮೀರ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com