ಕಥುವಾ: ಕಥುವಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪರ ವಕಾಲತ್ ಮಾಡಿದ್ದ ಮಾಜಿ ವಕೀಲ, ಹಾಲಿ ಡೆಪ್ಯೂಟಿ ಅಡ್ವೊಕೇಟ್ ಜನರಲ ಅಸೀಮ್ ಸಾಹ್ನೆ ಅವರನ್ನು ಜಮ್ಮು ಮತ್ತು ಕಾಶ್ಮೀರದ ನೂತನ ಹೆಚ್ಚುವರಿ ಅಡ್ವೊಕೇಟ್ ಜನರಲ್(ಎಎಜಿ)ಯಾಗಿ ನೇಮಕ ಮಾಡಲಾಗಿದೆ.
ಎಂಟು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಪರ ವಾದಿಸಿದ್ದ ಅಸೀಮ್ ಅವರನ್ನು ಕಾಶ್ಮೀರ ಸರ್ಕಾರ ನಿನ್ನೆ ಎಎಜಿಯಾಗಿ ನೇಮಕ ಮಾಡಿದೆ.
ಎಎಜಿಯಾಗಿದ್ದ ಎಂಎ ಬೇಗ್ ಅವರನ್ನು ಪಿಡಿಪಿ-ಬಿಜೆಪಿ ಸರ್ಕಾರ ತೆಗೆದು ಹಾಕಿತ್ತು. ಈಗ ಅವರ ಸ್ಥಾನ ಆಸೀಮ್ ಅವರನ್ನು ನೇಮಕ ಮಾಡಲಾಗಿದೆ.
ಪ್ರಸ್ತುತ ಕಣಿವೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದೆ.