ಭಾರತೀಯ ನೌಕಾನೆಲೆ ಮೇಲೆ ದಾಳಿಗೆ ಪಾಕ್ ಉಗ್ರರ ಸಂಚು, ಗುಪ್ತಚರ ಇಲಾಖೆ ಎಚ್ಚರಿಕೆ

ಭಾರತೀಯ ನೌಕಾನೆಲೆ ಮೇಲೆ ದಾಳಿ ನಡೆಸಲು ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ 10ಕ್ಕೂ ಹೆಚ್ಚು ಭಯೋತ್ಪಾದಕರು...
ಭಯೋತ್ಪಾದಕರು
ಭಯೋತ್ಪಾದಕರು
ನವದೆಹಲಿ: ಭಾರತೀಯ ನೌಕಾನೆಲೆ ಮೇಲೆ ದಾಳಿ ನಡೆಸಲು ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ 10ಕ್ಕೂ ಹೆಚ್ಚು ಭಯೋತ್ಪಾದಕರು ಗಡಿ ನುಸುಳಲು ಕಾದು ಕುಳಿತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಉಗ್ರರು ಜಮ್ಮು ಮತ್ತು ಕಾಶ್ಮೀರದ ದುದ್ನೈಲ್ ಮತ್ತು ಲೇಪಾ ವ್ಯಾಲಿಯ ಆತ್ಮೂಕಂ ಬಳಿಯ ಕೇಲ್ ನಲ್ಲಿ 10ಕ್ಕೂ ಹೆಚ್ಚು ಉಗ್ರರು ಗಡಿ ನುಸುಳಲು ಕಾದು ಕುಳಿತ್ತಿದ್ದು ಈ ಪ್ರದೇಶದಲ್ಲಿ ತುಂಬಾ ಎಚ್ಚರಿಕೆ ವಹಿಸುವಂತೆಯೂ ಹೇಳಿದೆ. 
ಹಿಜ್ಬುಲ್ ಮುಜಾಹಿದ್ದೀನ್ ಮತ್ತು ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಗಳ ಜತೆ ಭಯೋತ್ಪಾದಕರು ನಂಟನ್ನು ಹೊಂದಿದ್ದಾರೆ. ಉಗ್ರರು ಅಮರನಾಥ ಯಾತ್ರಿಗಳನ್ನು ಗುರಿಯಾಗಿಸಿಕೊಂಡು ಚುರ್ಸು ಮತ್ತು ಸಂಗಮ್ ಬಳಿಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ದಾಳಿ ಮಾಡುವ ಸಾಧ್ಯತೆ ಇದೆ ಎಂದು ಹೇಳಿದೆ. 
ಮೂಲಗಳ ಪ್ರಕಾರ ಉಗ್ರರಿಗೆ ಪಾಕಿಸ್ತಾನದ ಐಎಸ್ಐ ಬಾವಲ್ಪರ್ ನಲ್ಲಿ ತರಬೇತಿ ನೀಡಿದ್ದು ಈಜು ಸಹಿತ ನೀರಲ್ಲಿ ಬಳಸಬಹುದಾದ ಉನ್ನತ ಗುಣಮಟ್ಟದ ಶಸ್ತ್ರಾಸ್ತ್ರಗಳ ತರಬೇತಿ ನೀಡಲಾಗಿದೆ. 
ಈ ಸಂಬಂಧ ಗಡಿ ನಿಯಂತ್ರಣ ರೇಖೆ ಬಳಿ ಹೈ ಅಲರ್ಟ್ ಘೋಷಿಸಲಾಗಿದ್ದು ಸಿಆರ್ಪಿಎಫ್, ಐಟಿಬಿಪಿ, ಭೂಸೇನೆ ಕಾಶ್ಮೀರ ಪೊಲೀಸ್ ಅಧಿಕಾರಿಗಳಿಗೆ ಭದ್ರತೆ ಬಿಗಿಗೊಳಿಸುವಂತೆ ಆದೇಶ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com