ಶಶಿ ತರೂರ್ ಪ್ರೇಯಸಿಯೊಂದಿಗೆ ಪಾಕಿಸ್ತಾನದಲ್ಲಿ ನೆಮ್ಮದಿಯಿಂದ ಇರಬಹುದು- ಸುಬ್ರಹ್ಮಣ್ಯ ಸ್ವಾಮಿ

ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರ ತಾಲಿಬಾನ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಸುಬ್ರಹ್ಮಣ್ಯ ಸ್ವಾಮಿ, ಶಶಿ ತರೂರ್ ಪಾಕಿಸ್ತಾನದಲ್ಲಿ ತನ್ನ ಪ್ರೇಯಸಿಯೊಂದಿಗೆ ನೆಮ್ಮದಿಯಾಗಿ ಇರಬಹುದು ಎಂದು ಟಾಂಗ್ ನೀಡಿದ್ದಾರೆ.
ಸುಬ್ರಹ್ಮಣ್ಯ ಸ್ವಾಮಿ
ಸುಬ್ರಹ್ಮಣ್ಯ ಸ್ವಾಮಿ

ನವದೆಹಲಿ:ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರ ತಾಲಿಬಾನ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ  ಬಿಜೆಪಿ ನಾಯಕ ಸುಬ್ರಹ್ಮಣ್ಯ ಸ್ವಾಮಿ, ಇಂತಹ ಹೇಳಿಕೆಗಳಿಂದ ಶಶಿ ತರೂರ್ ಪಾಕಿಸ್ತಾನದಲ್ಲಿ ತನ್ನ ಪ್ರೇಯಸಿಯೊಂದಿಗೆ ನೆಮ್ಮದಿಯಾಗಿ ಇರಬಹುದು ಎಂದು ಟಾಂಗ್ ನೀಡಿದ್ದಾರೆ

ತಿರುವನಂತಪುರದಲ್ಲಿ  ಇಂದು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಶಶಿ ತರೂರ್, ಪಾಕಿಸ್ತಾನಕ್ಕೆ ಹೋಗು ಎಂದು ಅವರು ಕೇಳಿದ್ದರೆ.  ನಾನು ಹಿಂದೂ ಅಲ್ಲ ಅಂತ ನಿರ್ಧರಿಸುವ ಹಕ್ಕನ್ನು ಯಾರು ಅವರಿಗೆ ಕೊಟ್ಟಿರುವುದು, ದೇಶದಲ್ಲಿ ನನ್ನಗೆ ವಾಸಿಸುವ ಹಕ್ಕಿಲ್ಲವಾ, ಹಿಂದೂತ್ವದ ಹೆಸರಿನಲ್ಲಿ ಬಿಜೆಪಿ ತಾಲಿಬಾನ್ ಆರಂಭಿಸುತ್ತಿದೆಯಾ ಎಂದು ಪ್ರಶ್ನಿಸಿದ್ದರು.

ಶಶಿ ತರೂರ್ ಅವರ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿರುವ ಸುಬ್ರಹ್ಮಣ್ಯ ಸ್ವಾಮಿ, ದೇಶ ಬಿಡುವಂತೆ ಶಶಿ ತರೂರ್ ಅವರನ್ನು ನಾವು ಹೇಳುತ್ತಿಲ್ಲ. ಪಾಕಿಸ್ತಾನದ ಪ್ರೇಯಸಿಯನ್ನು ಅವರು ಹೊಂದಿದ್ದು, ಅವರೊಂದಿಗೆ ಅಲ್ಲಿ ಹೆಚ್ಚಿನ ನೆಮ್ಮದಿಯಿಂದ ಇರಬಹುದು ಎಂದು ಸಲಹೆ ನೀಡುತ್ತಿದ್ದೇವಿ ಎಂದು ಹೇಳಿದರು.

ಹಿಂದೂ ಬಗ್ಗೆ ಶಶಿ ತರೂರ್ ಅವರಿಗೆ ಒಲವು ಇದ್ದರೆ ಏಕೆ ಸುನಂದಾ ಪುಷ್ಕರ್ ನಿಗೂಢ ಸಾವಿನ ಪ್ರಕರಣದಲ್ಲಿ ಅವರು ಹೆಚ್ಚಿನ ಆಸಕ್ತಿ ತೋರರಲಿಲ್ಲ. ಹಾಗದರೆ, ಸುನಂದಾ ಪುಷ್ಕರ್ ಅವರನ್ನು ಅಸ್ವಾಭಾವಿಕವಾಗಿ  ಕೊಂದವರು ಯಾರು ಎಂದು  ಪ್ರಶ್ನಿಸಿದರು.

 ಇಂತಹ ಟೀಕೆಗಳಿಂದ ಪಾಕಿಸ್ತಾನಕ್ಕೆ ಅನುಕೂಲವಾಗುತ್ತಿದೆ. ಭಾರತೀಯರ  ಅಸಹ್ಯಕರ ಹೇಳಿಕೆಗಳನ್ನು ಪಾಕಿಸ್ತಾನದ ಸಂಸತ್ ಸದಸ್ಯರು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಸುಬ್ರಹ್ಮಣ್ಯ ಸ್ವಾಮಿ ತರೂರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com